Chikkodi

ಇಟನಾಳದಲ್ಲಿ ಎಸ್. ಎಂ. ಫೌಂಡೇಶನ್‌ನಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ

Share

ಸಮೀಪದ ಇಟನಾಳ ಗ್ರಾಮದ ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ಇತ್ತೀಚೆಗೆ ‘ಎಸ್. ಎಂ. ಫೌಂಡೇಶನ್’ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ನಾಗರಮುನ್ನೂಳಿ ಗ್ರಾಮದ ಹಿರಿಯ ಧುರೀಣ ಶಿವು ಮರ್ಯಾಯಿ ಅವರ ಸಾರಥ್ಯದ ಎಸ್. ಎಂ. ಫೌಂಡೇಶನ್ ನಿಂದ‌ ಈ ಶಿಬಿರ ಜರುಗಿತು. ಸಂಕೇಶ್ವರ ಪಟ್ಟಣದ ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯವರು ಶಿಬಿರ‌ ನಡೆಸಿಕೊಟ್ಟರು. ಇಟನಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಹಿರಿಯರು, ವಯೋವೃದ್ಧರು ಸೇರಿದಂತೆ ಸಾರ್ವಜನಿಕರು ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶಿವು ಮರ್ಯಾಯಿ, “ಯಾವುದೇ ಸ್ವಾರ್ಥದ ಭಾವನೆ ಇಲ್ಲದೆ, ಸಮಾಜದ ಪ್ರತಿಯೊಬ್ಬರ ಒಳಿತಿಗಾಗಿ ಹಾಗೂ ಬಡ ಮತ್ತು ಅಗತ್ಯವಿರುವ ಜನರಿಗೆ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಈ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಗಣ್ಯರು ಮಾತನಾಡಿ, ಸಾಮಾಜಿಕ ಕಳಕಳಿಯೊಂದಿಗೆ ಶಿವು ಮರ್ಯಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಎಸ್. ಎಂ. ಫೌಂಡೇಶನ್‌ನ ಜನಪರ ಮತ್ತು ಸಮಾಜಮುಖಿ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಲಕ್ಷ್ಮಿ ಸಾಗರ ಈಟ್ಟಿ, ಅನಿಲ್ ಈಟ್ಟಿ, ರಾಮು ಗಾವಡೆ, ಕರೆಪ್ಪಾ ಇಟ್ನಾಳೆ, ಸಿದ್ದಪ್ಪಾ ಬಂಬಲವಾಡಿ, ಸಂಜು ಕಡ್ಡಟಿ, ಸಚಿನ ಮೆತ್ರಿ, ದುಂಡೇಶ ಶೆಂಡೂರೆ, ಯಲ್ಲಪ್ಪ ಬೋರನ್ನವರ, ಸಂಜು ಅರಬ್ಯಾನವಾಡಿ, ದಂಡೇಶ್ ಶೆಂಡೂರೆ, ಈರಪ್ಪ ಅರಬ್ಯಾನವಾಡಿ, ಅಜೀತ ಪಾಟೀಲ, ಸಿದ್ದು ಪಾಟೀಲ, ಮಹಾಂತೇಶ ನಂದಿಕೂರಳಿ ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!