Belagavi

ಜನಪರ ಯೋಜನೆಗಳಿಗೆ ಸರ್ಕಾರದ ಬಳಿ ಹಣವಿಲ್ಲ; ಹೆಲಿಕಾಪ್ಟರ್ ಹಾರಾಟಕ್ಕೆ ಕೋಟಿ ಕೋಟಿ ದುಂದು ವೆಚ್ಚ!!!

Share

ರಾಜ್ಯದಲ್ಲಿ ಜನಪರ ಯೋಜನೆಗಳು ಹಾಗೂ ಮಾಶಾಸನಗಳಿಗೆ ಹಣವಿಲ್ಲದೆ ಬಡ ಕುಟುಂಬಗಳು ಬೀದಿಪಾಲಾಗುತ್ತಿದ್ದರೆ, ಇತ್ತ ಮುಖ್ಯಮಂತ್ರಿಗಳ ವಿಶೇಷ ಹೆಲಿಕಾಪ್ಟರ್ ಮತ್ತು ವಿಮಾನ ಹಾರಾಟಕ್ಕಾಗಿ ಸಾರ್ವಜನಿಕರ ತೆರಿಗೆಯ ಕೋಟ್ಯಂತರ ರೂಪಾಯಿಗಳನ್ನು ದುಂದುವೆಚ್ಚ ಮಾಡಲಾಗಿದೆ ಎಂಬ ಆರೋಪ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಸರ್ಕಾರದ ವಿರುದ್ಧ ಗಂಭೀರ ಮಾಡಿದ್ದು, ರಾಜ್ಯಪಾಲರಿಗೆ ದೂರು ಕೂಡ ನೀಡಿದ್ದಾರೆ.

ಬೆಳಗಾವಿಯಲ್ಲಿಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್, ರಾಜ್ಯದಲ್ಲಿ ಪ್ರಸ್ತುತ ಜನಪರ ಯೋಜನೆಗಳು, ಮಾಶಾಸನಗಳು ಮತ್ತು ಸರ್ಕಾರಿ ನೌಕರರ ವೇತನಕ್ಕೂ ಕೂಡ ಸಮರ್ಪಕವಾಗಿ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಆರೋಪಿಸಿದರು. ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ ಎಷ್ಟೋ ಸಂತ್ರಸ್ತ ಕುಟುಂಬಗಳು ಕಷ್ಟದ ಸುಳಿಗೆ ಸಿಲುಕಿ ಬೀದಿಪಾಲಾಗಿವೆ. ಆದರೆ, ಆಡಳಿತರೂಢ ನಾಯಕರು ಮಾತ್ರ ಸಾರ್ವಜನಿಕರ ತೆರಿಗೆ ಹಣವನ್ನು ಐಷಾರಾಮಿ ಪ್ರಯಾಣಗಳಿಗೆ ಮುಕ್ತವಾಗಿ ಬಳಸುತ್ತಿದ್ದಾರೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ವಿಶೇಷ ಹೆಲಿಕಾಪ್ಟರ್ ಹಾಗೂ ವಿಮಾನ ಹಾರಾಟಕ್ಕಾಗಿ ಹಿಂದಿನ ಸಮ್ಮಿಶ್ರ ಸರ್ಕಾರ ಹಾಗೂ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಒಟ್ಟು 116 ಕೋಟಿ 55 ಲಕ್ಷ 87 ಸಾವಿರ 338 ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ಭೀಮಪ್ಪ ಗಡಾದ್ ದಾಖಲೆಗಳನ್ನು ಬಿಡುಗಡೆ ಮಾಡಿದರು. ಈ ವಿಮಾನ ಪ್ರವಾಸಗಳ ವೆಚ್ಚವನ್ನು ಅಧಿಕೃತ ಸರ್ಕಾರಿ ಕೆಲಸಕ್ಕಾಗಿ ಬಳಸಿದ್ದಾರೋ ಅಥವಾ ಖಾಸಗಿ ಹಾಗೂ ಪಕ್ಷದ ಕೆಲಸಕ್ಕಾಗಿ ಬಳಸಿದ್ದಾರೋ ಎಂಬ ಗಂಭೀರ ಸಂಶಯವಿರುವುದರಿಂದ ಎಲ್ಲಾ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಒಂದು ವೇಳೆ ಇದು ಖಾಸಗಿ ಕಾರ್ಯಕ್ರಮಗಳಿಗೆ ಬಳಕೆಯಾಗಿದ್ದರೆ, ಆ ಹಣವನ್ನು ಮುಖ್ಯಮಂತ್ರಿಗಳೇ ತಮ್ಮ ಸ್ವಂತ ಜೇಬಿನಿಂದ ಮರುಪಾವತಿಸಬೇಕು ಎಂದು ಅವರು ಕರಾರು ಹಾಕಿದ್ದಾರೆ.

Tags:

error: Content is protected !!