ಬೆಳಗಾವಿಯ ಹಳೆಯ ಪಿ.ಬಿ. ರಸ್ತೆಯ ತಾನಾಜೀ ಗಲ್ಲಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸಕಲ ಮರಾಠಾ ಸಮಾಜದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ, ರೈತರ ಸಂಕಟ ಹಾಗೂ ವಿವಿಧ ಗಡಿ ಸಮಸ್ಯೆಗಳು ನಿವಾರಣೆಯಾಗಲಿ ಎಂದು ದೇವಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಳ್ಳಲಾಗಿದೆ.

ಬೆಳಗಾವಿಯ ಹಳೆಯ ಪಿ.ಬಿ. ರಸ್ತೆಯ ತಾನಾಜೀ ಗಲ್ಲಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸಕಲ ಮರಾಠಾ ಸಮಾಜದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ.ಈ ವರ್ಷ ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಬಡಾವಣೆಯ ಸಮಸ್ಯೆಯಿಂದಾಗಿ ತೀವ್ರ ಬರಗಾಲ ತಲೆದೋರಿದೆ. ಇದರಿಂದಾಗಿ ಹಗಲಿರುಳು ಕಷ್ಟಪಟ್ಟು ಬೆಳೆ ಬೆಳೆಯುವ ಅನ್ನದಾತ ಬಲಿರಾಜ ದಿಕ್ಕು ತೋಚದಂತೆ ಸಂಕಟದಲ್ಲಿದ್ದಾನೆ. ರೈತರ ಈ ಗೋಳು ಮರಾಠಾ ಸಮಾಜದ ಮುಖಂಡರನ್ನು ಕರಗಿಸಿದ್ದು, ನಾಡಿನ ಮೇಲೆ ಬಂದೊದಗಿರುವ ಈ ಪ್ರಾಕೃತಿಕ ವಿಕೋಪದ ವಿರುದ್ಧ ದೇವಿಯ ಮೊರೆ ಹೋಗುವ ನಿರ್ಧಾರಕ್ಕೆ ಬರಲಾಯಿತು.

ನವರಾತ್ರ್ಯೋತ್ಸವದ ಈ ವಿಶೇಷ ಸಂದರ್ಭದಲ್ಲಿ ನವಸಾಲಿಗ ದೇವಿಯೆಂದು ಖ್ಯಾತಿ ಪಡೆದಿರುವ ಶ್ರೀ ರೇಣುಕಾ ಯಲ್ಲಮ್ಮ ಮಂದಿರದಲ್ಲಿ ಸಕಲ ಮರಾಠಾ ಸಮಾಜದ ಬಂಧುಗಳು ಒಟ್ಟಾಗಿ ಸೇರಿದರು. ರೈತರ ಸಂಕಟ ನಿವಾರಣೆಯೊಂದಿಗೆ ವಿದ್ಯಾರ್ಥಿಗಳ ಸಮಸ್ಯೆಗಳು, ಪ್ರಮುಖ ಸಾಮಾಜಿಕ ಹಾಗೂ ಗಡಿ ಸಮಸ್ಯೆಗಳು ಶೀಘ್ರವೇ ಬಗೆಹರಿಯಬೇಕೆಂದು ದೇವಿಯ ಚರಣಗಳಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರತಿವರ್ಷದಂತೆ ಈ ವರ್ಷವೂ ಸಕಲ ಮರಾಠಾ ಸಮಾಜದ ವತಿಯಿಂದ ನಾಡಿನ ಒಳಿತಿಗಾಗಿ ಈ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ವಿಶೇಷ ಪೂಜೆಯಲ್ಲಿ ರಣಜೀತ್ ಚವ್ಹಾಣ್ ಪಾಟೀಲ್, ರಮಾಕಾಂತ ಕೊಂಡೂಸ್ಕರ್, ಕಿರಣ ಜಾಧವ್, ರಾಹುಲ್ ಮುಚ್ಚಂಡಿ, ಇಂದ್ರಜೀತ್ ಘಸಾರಿ ಹಾಗೂ ಸಾಗರ ಪಾಟೀಲ್ ಸೇರಿದಂತೆ ಸಮಾಜದ ಹಲವು ಪ್ರಮುಖ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
