ಬೆಳಗಾವಿ ದಕ್ಷಿಣ ಮತಕ್ಷೇತ್ರದ ಅಭಿವೃದ್ಧಿಯ ಪಥದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿತವಾಗಿದೆ. ಮಹಾತ್ಮಾ ಫೂಲೆ ರಸ್ತೆಯಲ್ಲಿ ಪೋರವಾಲ್ ಬಂಧುಗಳಿಂದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ‘ದಿ ರೇಮಂಡ್ ಶಾಪ್’ ಇಂದು ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದ್ದು, ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ.

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಾತ್ಮಾ ಫೂಲೆ ರಸ್ತೆಯಲ್ಲಿ ಪೋರವಾಲ್ ಬಂಧುಗಳಿಂದ ನೂತನವಾಗಿ ಆರಂಭಗೊಂಡಿರುವ ‘ದಿ ರೇಮಂಡ್ ಶಾಪ್’ ಅನ್ನು ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹಾಗೂ ಡಿಸಿಪಿ ನಾರಾಯಣ್ ಬರಮನಿ ಅವರು ಇಂದು ಅದ್ಧೂರಿಯಾಗಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಭಯ್ ಪಾಟೀಲ್, 2008ರಲ್ಲಿ ತಾವು ಮೊದಲ ಬಾರಿ ಶಾಸಕರಾದಾಗ ಈ ರಸ್ತೆಯನ್ನು ಅಭಿವೃದ್ಧಿಪಡಿಸಿದಾಗ ಕೆಲವರು ವ್ಯಂಗ್ಯವಾಡಿದ್ದರು. ಆದರೆ, ಇಂದು ಅದೇ ಪ್ರದೇಶ ದಕ್ಷಿಣ ಕ್ಷೇತ್ರದ ಕೇಂದ್ರಬಿಂದುವಾಗಿ ಬೆಳೆದು ನಿಂತಿದ್ದು, ಮಾರುಕಟ್ಟೆ ಪ್ರದೇಶವು ಗಣನೀಯವಾಗಿ ಅಭಿವೃದ್ಧಿಗೊಂಡು ಇಲ್ಲಿನ ಭೂಮಿಯ ಬೆಲೆಯು ಹತ್ತು ಪಟ್ಟು ಹೆಚ್ಚಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಈ ಪ್ರದೇಶದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಅವರು ಭರವಸೆ ನೀಡಿದರು.

ಆಧುನಿಕತೆಯ ಬದಲಾಗುತ್ತಿರುವ ಧಾಟಿಗೆ ತಕ್ಕಂತೆ ಅತ್ಯಾಕರ್ಷಕ ವಿನ್ಯಾಸ ಹಾಗೂ ಅತ್ಯುತ್ಕೃಷ್ಟ ಗುಣಮಟ್ಟದೊಂದಿಗೆ ಈ ಹೊಸ ಶಾಪ್ ಸಿದ್ಧಗೊಂಡಿದೆ. ಇಲ್ಲಿ ಪುರುಷರ ರೆಡಿಮೇಡ್ ವಿವಿಧ ಬಗೆಯ ಬಟ್ಟೆಗಳು, ಮೆಟೀರಿಯಲ್ಸ್, ಟೈ, ಕಫ್ಲಿಂಕ್ಸ್, ಟವೆಲ್ಸ್, ಫ್ಯಾಷನ್ ಆಕ್ಸೆಸರೀಸ್ ಹಾಗೂ ಬ್ಲಾಂಕೆಟ್ಗಳು ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳು ಒಂದೇ ಸೂರಿನಡಿ ಗ್ರಾಹಕರಿಗೆ ಲಭ್ಯವಾಗುತ್ತಿವೆ.

ಈ ಉದ್ಘಾಟನಾ ಸಮಾರಂಭದಲ್ಲಿ ಅಂಗಡಿಯ ಸಂಚಾಲಕರಾದ ವಿಜಯ್ ಪೋರವಾಲ್, ರಾಜೇಶ್ ಪೋರವಾಲ್, ಪ್ರಕಾಶ್ ಪೋರವಾಲ್, ಮದನ್ ಪೋರವಾಲ್, ರಿತೇಶ್ ಪೋರವಾಲ್, ರಾಹುಲ್ ಪೋರವಾಲ್ ಸೇರಿದಂತೆ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ನೂತನ ಮಳಿಗೆಗೆ ಶುಭ ಹಾರೈಸಿದರು.
