Belagavi

ಬೆಳಗಾವಿ: ಬಸವೇಶ್ವರ ವೃತ್ತದ ಬ್ಯಾನರ್, ಫ್ಲೆಕ್ಸ್ ತೆರವಿಗೆ ಪಾಲಿಕೆ ಆಯುಕ್ತರಿಗೆ ಬಸವಪರ ಸಂಘಟನೆಗಳ ಗಡುವು

Share

ಬೆಳಗಾವಿಯ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಮೂರ್ತಿಗೆ ಮರೆಯಾಗುವಂತೆ ಅಳವಡಿಸಲಾಗಿರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿ ಬಸವಪರ ಸಂಘಟನೆಗಳ ಒಕ್ಕೂಟ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರ ವೃತ್ತದ ಉದ್ಯಾನವನದಲ್ಲಿ ಹೊಸದಾಗಿ ಬೃಹತ್ ಮೂರ್ತಿಯ ಅನಾವರಣಕ್ಕೆ ಸಿದ್ಧತೆ ನಡೆಯುತ್ತಿದ್ದು, ಉದ್ಯಾನವನದ ಮುಂಭಾಗದಲ್ಲಿ ಬಸವಣ್ಣನವರ ಮೂರ್ತಿ ಕಾಣಿಸದಂತೆ ಫ್ಲೆಕ್ಸ್, ಬ್ಯಾನರ್ ಹಾಗೂ ಕಟೌಟ್‌ಗಳನ್ನು ಅಳವಡಿಸಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕೃತ್ಯದಿಂದ ಉದ್ಯಾನವನದ ಸೌಂದರ್ಯ ಹಾಳಾಗುತ್ತಿರುವುದಲ್ಲದೆ ಬಸವಣ್ಣನವರಿಗೆ ಅಗೌರವ ತೋರಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಸವರಾಜ್ ರೊಟ್ಟಿ, ಶಿವಸಿದ್ಧ ಪಾಟೀಲ್, ಮನೋಹರ ಪುಡಕಲಕಟ್ಟಿ, ಅಶೋಕ ಮಳಗಲಿ ಹಾಗೂ ಸುಜೀತ್ ಮುಳಗುಂದ ಅವರನ್ನೊಳಗೊಂಡ ಬಸವಪರ ಸಂಘಟನೆಗಳ ಒಕ್ಕೂಟದ ನಿಯೋಗವು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಈ ಹಿಂದೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ತಕ್ಷಣವೇ ಉದ್ಯಾನವನದ ಸುತ್ತಮುತ್ತ ಯಾವುದೇ ಬ್ಯಾನರ್ ಹಾಕದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು; ಇಲ್ಲವಾದಲ್ಲಿ ನಗರದಲ್ಲಿ ಲಿಂಗಾಯತ ಹಾಗೂ ಬಸವಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪಾಲಿಕೆಗೆ ಎಚ್ಚರಿಸಲಾಗಿದೆ.

Tags:

error: Content is protected !!