ವಿಜಯಪುರದಲ್ಲಿ ವೃಕ್ಷಥಾನ್ 7ನೇ ಆವೃತ್ತಿಯ ‘ರನ್ ಫಾರ್ ಗ್ರೀನ್ ಸಿಟಿ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಹಸಿರು ಮತ್ತು ಸ್ವಚ್ಛ ವಿಜಯಪುರಕ್ಕಾಗಿ ಓಟ ಆಯೋಜಿಸಿದ್ದರು. ಡಿಸೆಂಬರ್ 13 ರಂದು ನಡೆಯಲಿರುವ ಮುಖ್ಯ ಕಾರ್ಯಕ್ರಮಕ್ಕೆ ಮುನ್ನಾದಿನವಾಗಿ ನಡೆದ ಈ ಓಟದಲ್ಲಿ ನೂರಾರು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…

ಐತಿಹಾಸಿಕ ವಿಜಯಪುರ ನಗರದಲ್ಲಿ ಹಸಿರು ಸಿರಿ ಹೆಚ್ಚಿಸಲು ಹಾಗೂ ಸ್ವಚ್ಛತೆಯ ಅರಿವು ಮೂಡಿಸಲು ನಗರದ ಗಗನ್ ಮಹಲ್ ಮುಂಭಾಗದಲ್ಲಿ ಹಸಿರು ಮತ್ತು ಸ್ವಚ್ಛ ವಿಜಯಪುರ ಓಟಕ್ಕೆ ಚಾಲನೆ ನೀಡಲಾಯಿತು. ಮಹಾನಗರ ಪಾಲಿಕೆ ಮಹಾಪೌರರಾದ ಎಂ ಎಸ್ ಕರಡಿ ಅವರು ಹಸಿರು ನಿಶಾನೆ ತೋರುವ ಮೂಲಕ 3 ಕಿಲೋಮೀಟರ್ ಜಾಗೃತಿ ಓಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ನಗರದ ಗಗನ್ ಮಹಲ್‌ನಿಂದ ಆರಂಭವಾದ ಈ ಓಟವು ನಗರದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ವೃತ್ತದ ಮೂಲಕ ಹಾದು, ಶಿವಾಜಿ ಸರ್ಕಲ್‌ನಲ್ಲಿ ಸುತ್ತು ಹೊಡೆದು ಮರಳಿ ಗಗನ್ ಮಹಲ್ ಆವರಣದಲ್ಲೇ ಯಶಸ್ವಿಯಾಗಿ ಕೊನೆಗೊಂಡಿತು. ವಿಜಯಪುರ ಅರಣ್ಯ ವಿಭಾಗ, ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಈ ಓಟದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಮಹಾಂತೇಶ ಬಿರಾದಾರ್ ಸೇರಿದಂತೆ ಹಲವು ಜನ ಅಧಿಕಾರಿಗಳು, ಪೌರ ಕಾರ್ಮಿಕರು ಸಹಿತ 3 ಕಿಲೋ ಮೀಟರ್ ಓಟದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಓಡಿದರು…
ಈ ಜಾಗೃತಿ ಓಟದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಮಹಾಂತೇಶ ಬಿರಾದಾರ್, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮತ್ತು ನೂರಾರು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಡಿಸೆಂಬರ್ 13 ರಂದು ನಡೆಯಲಿರುವ ವೃಕ್ಷಥಾನ್ 7ನೇ ಆವೃತ್ತಿಗೆ ಈ ಓಟವು ಮುನ್ನುಡಿ ಬರೆದಿದೆ..
