ರಾಹುಲ್ ಗಾಂಧಿ ವಿರುದ್ದ ದಾಖಲಾದ ಎಫ್ ಐ ಆರ್ ವಿರೋಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿಜಯಪುರ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಯೆಸಿ ಡಿಸಿ ಅವರ ಮೂಖಾಂತರ ರಾಷ್ಟ್ರ ಪತಿಯವರಿಗೆ ಮನವಿ ಅರ್ಪಿಸಿದರು.ಪ್ರತಿಭಟನೆ ವೇಳೆ ಅಮಿತ್ ಶಾ ಹಾಗೂ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಎಂ ಬಿ ಪಾಟೀಲ್ ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಸಚಿವ ಪಾಟೀಲ್ ಗೆ
ಶಾಸಕ ವಿಠ್ಠಲ ಕಟಕಧೋಂಡ ಹಾಗೂ ಅನೇಕ ನಾಯಕರು ಮತ್ತು ಕಾರ್ಯಕರ್ತರು ಸಾಥ್ ನೀಡಿದರು.
ಭಾರತದಲ್ಲಿ ನೆಲದಲ್ಲಿ ಒಂದು, ವಿದೇಶದಲ್ಲಿ ಒಂದು ನೀತಿಯನ್ನ ಆರ್ ಎಸ್ ಎಸ್ ನ ಮೋಹನ ಭಾಗವತ್ ಹೊಂದಿದ್ದಾರೆ. ಭಾರತದಲ್ಲಿ ಮುಸ್ಲಿಂರ ಪರವಾಗಿ ಮಾತನಾಡ್ತಾರೆ,ಅಮೇರಿಕದಲ್ಲಿ ಮುಸ್ಲಿಂರ ಪರವಾಗಿ ಮಾತ್ನಾಡ್ತಾರೆ. ಇವರ್ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಇರಲಿಲ್ಲ.ಇವರಿಂದ ನಾವು ಕಲಿಯುವುದು ಏನು ಇಲ್ಲ ಎಂದು ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ದ ವಾಗ್ದಾಳಿ ನಡೆಸಿದರು.
