Belagavi

ಪದ್ಮಶ್ರೀ ಪ್ರಭಾಕರ್ ಕೋರೆ ಅವರಿಗೆ ಪುಣೆಯಲ್ಲಿ ವಿಶೇಷ ಸತ್ಕಾರ ಸಮಾರಂಭ

Share

ಕೆ.ಎಲ್.ಇ. ಸೊಸೈಟಿಯ ಕಾರ್ಯಾಧ್ಯಕ್ಷ ಹಾಗೂ ಶಿಕ್ಷಣತಜ್ಞರಾದ ಡಾ. ಪ್ರಭಾಕರ್ ಬಸವಪ್ರಭು ಕೋರೆ ಅವರಿಗೆ ಭಾರತ ಸರ್ಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಲಿಂಗಾಯತ ಸಂಘರ್ಷ ಸಮಿತಿ ಹಾಗೂ ವೀರಶೈವ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಬಸವಪ್ರಭು ಕೋರೆ ಅವರ ಸತ್ಕಾರ ಸಮಾರಂಭವು ಪುಣೆಯ ಬಿಬ್ವೇವಾಡಿಯ ಲೋಕಶಾಹೀರ್ ಅಣ್ಣಾಭಾವು ಸಾಠೆ ಸಭಾಗೃಹದಲ್ಲಿ ಜರುಗಿತು. ಪದ್ಮವಿಭೂಷಣ ಸಂಸದ ಶರದಚಂದ್ರ ಪವಾರ್ ಅವರ ಶುಭಹಸ್ತದಿಂದ ಹಾಗೂ ಹ.ಭ.ಪ. ಸದ್ಗುರು ಗಹೀನಿನಾಥ ಜ್ಞಾನೇಶ್ವರ ಮಹಾರಾಜ್ ಔಸೇಕರ ಮತ್ತು ಮಾಜಿ ರಾಜ್ಯಪಾಲ ಶ್ರೀನಿವಾಸ ದಾದಾಸಾಹೇಬ್ ಪಾಟೀಲ್ ಅವರ ಪ್ರಮುಖ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪೂರ್ಣ ಲಿಂಗಾಯತ ಸಮಾಜದ ವತಿಯಿಂದ ನೆರವೇರಿತು.

Tags:

error: Content is protected !!