kagawad

ಸುಕ್ಷೇತ್ರ ಖಿಳೇಗಾಂವ ಬಸವಣ್ಣನ ಸನ್ನಿಧಿಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ: ಶ್ರಾವಣ ಮಾಸದಲ್ಲಿ ದೇವರ ದರ್ಶನ

Share

ಮತಕ್ಷೇತ್ರದ ಸುಕ್ಷೇತ್ರ ಖಿಳೇಗಾಂವ ಬಸವೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಅಥಣಿ ಶುಗರ್ಸ್ ಕಾರ್ಖಾನೆಯ ಸಂಸ್ಥಾಪಕರಾದ ಶ್ರೀಮಂತ್ ತಾತ್ಯಾ ಪಾಟೀಲ್ ಅವರು ಇಂದು ಶ್ರಾವಣ ಮಾಸದ ಪ್ರಯುಕ್ತ ಭೇಟಿ ನೀಡಿ, ಬಸವಣ್ಣನ ದರ್ಶನ ಪಡೆದುಕೊಂಡರು.

ದೇವಸ್ಥಾನದ ಕಚೇರಿಗೆ ಭೇಟಿ ನೀಡಿ, ಕುಶಲೋಪರಿಯಾಗಿ ಕಮಿಟಿಯವರೊಂದಿಗೆ ಮಾತುಕತೆ ನಡೆಸಿದರು. ದೇವಸ್ಥಾನಕ್ಕೆ ಆಗಮಿಸಿದ ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಅವರನ್ನು ವಿವಿಧ ವಾದ್ಯವೃಂದಗಳೊಂದಿಗೆ ದೇವಸ್ಥಾನಕ್ಕೆ ಸ್ವಾಗತಿಸಲಾಯಿತು.

ನಂತರ ಅವರು ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ಅವರೊಂದಿಗೆ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Tags:

error: Content is protected !!