ತಾಲೂಕಿನ ಕರಗಾಂವ ಗ್ರಾಮದಲ್ಲಿ ತಹಶೀಲ್ದಾರ್ ರಾಜೇಶ ಬುರ್ಲಿ ಅವರು ಬರ ಪರಿಸ್ಥಿತಿಯ ಜಂಟಿ ಪರಿಶೀಲನೆ ನಡೆಸಿದರು. ಮಳೆಯ ಅಭಾವದಿಂದಾಗಿ ಹಾನಿಗೊಳಗಾದ ಕಬ್ಬು, ಶೇಂಗಾ ಹಾಗೂ ಜೋಳ (ಗೋಂಜಾಳ) ಸೇರಿದಂತೆ ವಿವಿಧ ಬೆಳೆಗಳ ಸ್ಥಿತಿಗತಿಯನ್ನು ಅಧಿಕಾರಿಗಳ ತಂಡದೊಂದಿಗೆ ನೇರವಾಗಿ ವೀಕ್ಷಿಸಿದರು.


ತಾಲೂಕಿನಲ್ಲಿ ಬರ ಪರಿಸ್ಥಿತಿಯ ನಿಖರ ಸಮೀಕ್ಷೆಗಾಗಿ ಒಟ್ಟು 6 ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳ ಮೂಲಕ ಪ್ರತಿ ಬೆಳೆಯ ಹಾನಿಯ ಪ್ರಮಾಣವನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಹಶೀಲ್ದಾರರು ತಿಳಿಸಿದರು. ಒಣಗಿ ಹಾಳಾಗಿರುವ ಬೆಳೆಗಳಿಗೆ ಸರ್ಕಾರದಿಂದ ಸೂಕ್ತ ಹಾಗೂ ನ್ಯಾಯಯುತ ಪರಿಹಾರ ಒದಗಿಸಲು ಪ್ರಾಮಾಣಿಕ ಶ್ರಮ ವಹಿಸುವುದಾಗಿ ರೈತರಿಗೆ ಭರವಸೆ ನೀಡಿದರು.
ಈ ಪರಿಶೀಲನಾ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ದಳವಾಯಿ, ಕಂದಾಯ ಅಧಿಕಾರಿಗಳು, ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.
