ಬೆಳಗಾವಿಯ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಿಗೆ ಮಹಿಳಾ ಘಟಕದ ಅಧ್ಯಕ್ಷರಿಂದ ಸನ್ಮಾನಿಸಲಾಯಿತು.

ಇತ್ತಿಚೆಗೆ ಕಾಂಗ್ರೆಸ್ ಪಕ್ಷವು ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಬಸವರಾಜ್ ಶೇಗಾವಿ ಹಾಗೂ ನಗರಾಧ್ಯಕ್ಷರಾಗಿ ರಾಜಾ ಸಲೀಮ್ ಕಾಶಮ್ಮನವರ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಬೆಳಗಾವಿ ನಗರ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಲತಾ ಎಸ್. ಮಾನೆ ಅವರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರುಗಳು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಸರ್ಕಾರದ ಯೋಜನೆಗಳನ್ನು ಜನರಿಗೆ ಮತ್ತು ಮಹಿಳೆಯರ ವಿಶೇಷ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ಈ ವೇಳೆ ಸವಿತಾ ಖೋಬ್ರೆ, ಸಲೀಮಾ ಗೋಕಾಕ್, ಫಿರ್ದೋಜ್ ಶೇಖ್, ವಿಜಯಾ ರಾಯಣ್ಣವರ, ಲತಾ ಅಲಾಸ್ಕರ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
