Belagavi

ವರುಣದೇವನ ಕೃಪೆಗಾಗಿ ಹಲಗಾ ಗ್ರಾಮಸ್ಥರಿಂದ ಭೀಮಸೇನನ ಪಾದಗಳಿಗೆ ವಿಶೇಷ ಪೂಜೆ!

Share

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕಂಗಾಲಾಗಿರುವ ಅನ್ನದಾತರು ಹಾಗೂ ಗ್ರಾಮಸ್ಥರು ಮಳೆಗಾಗಿ ನಾನಾ ರೀತಿಯ ದೇವತಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮದಲ್ಲಿ ಐತಿಹಾಸಿಕ ನಂಬಿಕೆಯಂತೆ ಗ್ರಾಮಸ್ಥರು ಭೀಮಸೇನನ ಪಾದಗಳಿಗೆ ವಿಶೇಷ ಪೂಜೆ ಸಲ್ಲಿಸಿ, ವರುಣ ದೇವನ ಕೃಪೆಗಾಗಿ ಪ್ರಾರ್ಥಿಸಿದ್ದಾರೆ.

ಬೆಳಗಾವಿ ತಾಲ್ಲೂಕಿನ ಹಲ್ಗಾ ಗ್ರಾಮದ ದೇವಸ್ಥಾನದ ಪಂಚ ಕಮಿಟಿ ಹಾಗೂ ಗ್ರಾಮಸ್ಥರು ಮಳೆಗಾಗಿ ಮೊರೆ ಹೋಗಿದ್ದು, ಮೊದಲು ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಂತರ ಗ್ರಾಮದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರವಿರುವ, ಐದು ಗ್ರಾಮಗಳ ಗಡಿಯಲ್ಲಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ಭೀಮಸೇನನ ಪಾದಗಳಿರುವ ಸ್ಥಳಕ್ಕೆ ತೆರಳಿ ನೂತನ ಪೂಜೆ ಸಲ್ಲಿಸಿದರು. ಈ ಸ್ಥಳದಲ್ಲಿ ಪೂಜೆ ಸಲ್ಲಿಸಿದರೆ ಖಂಡಿತವಾಗಿ ಮಳೆಯಾಗುತ್ತದೆ ಎಂಬ ಹಲ್ಗಾ ಗ್ರಾಮಸ್ಥರ ತೀವ್ರ ನಂಬಿಕೆಯಂತೆ, ಗ್ರಾಮಸ್ಥರು ಹಾಗೂ ಮುಖಂಡರು ಒಟ್ಟಾಗಿ ಸೇರಿ ವರುಣದೇವನಲ್ಲಿ ಸಕ್ಕರೆ ಮಳೆಯಾಗಲಿ ಎಂದು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದರು.

Tags:

error: Content is protected !!