
ವಿಜಯನಗರದ ಕೂಡ್ಲಿಗಿಯಿಂದ ಹೊಸ ಆಡಳಿತಾತ್ಮಕ ಬದಲಾವಣೆಗೆ ಮುನ್ನುಡಿ ಬರೆಯಲಾಗಿದ್ದು, ರಾಜ್ಯದ 31 ಜಿಲ್ಲೆಗಳಲ್ಲಿ ನೂತನ ‘ಪ್ರಜಾಸೇವೆ ಇಲಾಖೆ’ಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಇನ್ನುಂದೆ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವ ಬರಿ ಬದಲಾಗಿ, ಸ್ವತಃ ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಮುಖ್ಯಮಂತ್ರಿಗಳನ್ನು ‘ನಾಡಿನ ದೊರೆ’ ಎನ್ನದೇ ಪ್ರಜಾಸೇವಕ ಎಂದು ಕರೆಯಿರಿ ಎಂದಿದ್ದಾರೆ.


ವಿಜಯನಗರದ ಕೂಡ್ಲಿಗಿ ಪಟ್ಟಣದ ಶಾಸಕರ ಕಾರ್ಯಾಲಯದ ಎದುರು ನೂತನ ಪ್ರಜಾಸೇವೆ ಇಲಾಖೆಗೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಚಾಲನೆಯನ್ನು ನೀಡಿದರು.

ಈ ವೇಳೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು ನಮ್ಮ ರಾಜ್ಯದ 31 ಜಿಲ್ಲೆಗಳಲ್ಲಿಯೂ ಪ್ರಜಾಸೇವೆ ಇಲಾಖೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ರಾಜ್ಯದಲ್ಲಿ 136 ಸೀಟ್ ಕೊಟ್ಟು ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗಿ, ದೇಶಕ್ಕೆ ಮಾದರಿಯಾಗುವಂತಹ ಅವಕಾಶವನ್ನು ರಾಜ್ಯದ ಜನತೆ ನೀಡಿದ್ದು, ಇದೊಂದು ಸರ್ಕಾರಿ ಕಾರ್ಯಕ್ರಮವಲ್ಲದೇ, ಜನರು ಸರ್ಕಾರದ ಬಳಿ ಬರಬೇಕಾದ ಕಾಲ ಈಗ ಬದಲಾಗಿದೆ. ಇನ್ಮುಂದೆ ಸರ್ಕಾರವೇ ಜನರ ಮುಂದೆ ಹೋಗಬೇಕು. ಜನರ ಮನೆ ಬಾಗಿಲಿಗೆ ಆಡಳಿತ ತಲುಪಿಸಲು ಈ ಪವಿತ್ರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಅಧಿಕಾರಿಗಳು ಸರ್ಕಾರದಿಂದ ಜನರನ್ನು ದೂರವಿಡದೇ, ಜನರ ಬಳಿಗೆ ಹೋಗಿ ಸಮಸ್ಯೆಗಳನ್ನು ಕೇಳಲು ಹೊಸ ಇಲಾಖೆಯನ್ನು ಆರಂಭಿಸಲಾಗಿದೆ. ದೊರೆಗಳ ಕಾಲ ಹೋಗಿ ಪ್ರಜಾಪಪ್ರಭುತ್ವ ಬಂದಿದೆ. ಮುಖ್ಯಮಂತ್ರಿಗಳನ್ನು ನಾಡಿನ ದೊರೆ ಎಂದು ಕರೆಯದೇ, ಅದರ ಬದಲೂ ಪ್ರಜಾಸೇವಕ ಎಂದು ಕರೆದರೇ ಅದಕ್ಕಿಂತ ಸಂತೋಷ ಇನ್ನೊಂದಿಲ್ಲ. ಎಲ್ಲರೂ ವಿಧಾನಸೌಧ, ಡಿಸಿ ಕಚೇರಿಗೆ, ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳ ಕಾರ್ಯಾಲಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಬದಲಾಯಿಸುವುದೇ ನಮ್ಮ ಮುಖ್ಯ ಉದ್ಧೇಶವಾಗಿದೆ ಎಂದರು.


ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವಂತಪ್ಪ, ಸ್ಥಳೀಯ ಶಾಸಕರಾದ ಶ್ರೀನಿವಾಸ್, ಮುಖ್ಯಮಂತ್ರಿಗಳ ಸಲಹೆಗಾರರಾದ ಚಂದ್ರಶೇಖರ್, ವಿಧಾನಸಭೆಯ ಉಪಸಭಾಧ್ಯಕ್ಷರಾದ ಮಂಕಾಳು ವೈದ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ತುಕಾರಾಮ್ ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಇನ್ನುಳಿದವ ಗಣ್ಯರು ಉಪಸ್ಥಿತರಿದ್ಧರು.

