Belagavi

ಶಿಥಿಲಗೊಂಡಿದ್ದ ಓವರ್’ಹೆಡ್ ಟ್ಯಾಂಕ್ ಧರೆಗೆ; ನಿಟ್ಟುಸಿರು ಬಿಟ್ಟ ಜನತೆ!!!!

Share

ಹಳೆಯ ಬೆಳಗಾವಿಯ ಗಣೇಶಪೇಟೆಯಲ್ಲಿ ಭೀತಿ ಸೃಷ್ಟಿಸಿದ್ದ ಶಿಥಿಲಗೊಂಡಿದ್ದ ಬೃಹತ್ ಓವರ್’ಹೆಡ್ ನೀರಿನ ಟ್ಯಾಂಕ್’ನ್ನು ಯಶಸ್ವಿಯಾಗಿ ನೆಲಸಮಗೊಳಿಸಲಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಸುರಕ್ಷಿತವಾಗಿ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.


ಹಳೆಯ ಬೆಳಗಾವಿಯ ಗಣೇಶಪೇಟೆ ಪ್ರದೇಶದಲ್ಲಿದ್ದ ಹಲವು ವರ್ಷಗಳ ಹಳೆಯ ಹಾಗೂ ಶಿಥಿಲಗೊಂಡಿದ್ದ ಬೃಹತ್ ಕುಡಿಯುವ ನೀರಿನ ಟ್ಯಾಂಕಿಯನ್ನು ಟೆಂಡರ್ ಪ್ರಕ್ರಿಯೆಯ ಮೂಲಕ ಸುರಕ್ಷಿತವಾಗಿ ತೆರವುಗೊಳಿಸಿ, ನೆಲಸಮ ಮಾಡಲಾಗಿದೆ. ಈ ಶಿಥಿಲಗೊಂಡ ಓವರ್’ಹೆಡ್ ಟ್ಯಾಂಕ್ ಎಲ್ಲಿ ಬಿದ್ದು ಹೋಗುತ್ತದೋ ಎಂಬ ಭೀತಿಯಿಂದ ಸುತ್ತಮುತ್ತಲಿನ ಮನೆಗಳು, ಸಮೀಪದ ಶಾಲೆ ಹಾಗೂ ಸ್ಥಳೀಯ ಶ್ರೀ ಗಣಪತಿ, ಕಲ್ಮೇಶ್ವರ ಮತ್ತು ಮಹಾಲಕ್ಷ್ಮಿ ದೇವಸ್ಥಾನಗಳಿಗೆ ಭಾರಿ ಧಕ್ಕೆಯಾಗಬಹುದು ಎಂಬ ಆತಂಕ ಹಾಗೂ ಗೊಂದಲ ಸಾರ್ವಜನಿಕರಲ್ಲಿ ಮನೆ ಮಾಡಿತ್ತು. ಆದರೆ, ಅಧಿಕಾರಿಗಳ ಸೂಕ್ತ ಯೋಜನೆಯೊಂದಿಗೆ ಯಾವುದೇ ಅನಾಹುತ ಸಂಭವಿಸದಂತೆ ಹಾಗೂ ಯಾರಿಗೂ ಗಾಯಗಳಾಗದಂತೆ ಕಾರ್ಯಾಚರಣೆ ನಡೆಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯ ಕುರಿತು ಸಂತಸ ವ್ಯಕ್ತಪಡಿಸಿದ ಸ್ಥಳೀಯ ಮುಖಂಡರು, ಕಾಮಗಾರಿಗೆ ಸಹಕರಿಸಿದ ಗುತ್ತಿಗೆದಾರರು, ಗ್ರಾಮಸ್ಥರು, KUWS ಅಧಿಕಾರಿಗಳು, ಕಾರ್ಯನಿರ್ವಾಹಕ ಇಂಜಿನಿಯರ್‌ಗಳು ಹಾಗೂ ಪೊಲೀಸ್ ಇಲಾಖೆಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ಪ್ರತಿಯೊಬ್ಬರ ಒಗ್ಗಟ್ಟಿನ ಸಹಕಾರ ಹಾಗೂ ಸ್ಥಳೀಯ ದೇವತೆಗಳ ಆಶೀರ್ವಾದದಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದೆ, ಕಾಮಗಾರಿ ಅತ್ಯಂತ ಸುರಕ್ಷಿತವಾಗಿ ಪೂರ್ಣಗೊಂಡಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Tags:

error: Content is protected !!