Belagavi

ಕಾಂಗ್ರೆಸ್ ಎಂದರೇ..ಅಹಿಂದ್… ಅಹಿಂದ್ ಎಂದರೇ ಕಾಂಗ್ರೆಸ್; ಸಚಿವ ಸತೀಶ್ ಜಾರಕಿಹೊಳಿ

Share

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ರಚನೆ ವೇಳೆ ಉಂಟಾಗಿರುವ ಅಸಮಾಧಾನಗಳನ್ನು ಶಮನಗೊಳಿಸಿ, ಪಕ್ಷವನ್ನು ಯಥಾಸ್ಥಿತಿಗೆ ತರಲು ಹಿರಿಯ ನಾಯಕರು ಮುಂದಾಗಿದ್ದಾರೆ. ಬರ ಪರಿಹಾರ ಮತ್ತು ಬೆಳೆಹಾನಿ ಸಮೀಕ್ಷೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ವರದಿ ನೀಡಿದ್ದು, ಕೇಂದ್ರ ತಂಡದ ಭೇಟಿಯ ಬಳಿಕ ಅಧಿಕೃತವಾಗಿ ಬರ ಘೋಷಣೆಯಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ರಚನೆ ವೇಳೆ ಉಂಟಾಗಿರುವ ಅಸಮಾಧಾನಗಳನ್ನು ಶಮನಗೊಳಿಸಿ, ಪಕ್ಷವನ್ನು ಯಥಾಸ್ಥಿತಿಗೆ ತರಲು ಹಿರಿಯ ನಾಯಕರು ಮುಂದಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಹೋಗುವುದು ಅನಿವಾರ್ಯ ಹಾಗೂ ಜವಾಬ್ದಾರಿಯಾಗಿದೆ ಎಂದರು.

ಇದೇ ವೇಳೆ ‘ಅಹಿಂದ್ ಎಂದರೇ ಕಾಂಗ್ರೆಸ್, ಕಾಂಗ್ರೆಸ್ ಎಂದರೇ ಅಹಿಂದ್’ ಎಂದು ಅಭಿಪ್ರಾಯಪಟ್ಟ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಅಹಿಂದ್ ಸಮಾವೇಶದಲ್ಲಿ ಸಮಯಾವಕಾಶ ನೋಡಿಕೊಂಡು ಭಾಗವಹಿಸುವುದಾಗಿ ತಿಳಿಸಿದರು. ಸಚಿವ ಬಿ. ನಾಗೇಂದ್ರ ಅವರ ಕುರಿತಾದ ಪ್ರಶ್ನೆಗೆ ಉತ್ತರಿಸಿ, ಲೋಕಾಯುಕ್ತರು ಈಗಾಗಲೇ ಕ್ಲೀನ್ ಚಿಟ್ ನೀಡಿರುವ ಆಧಾರದ ಮೇಲೆ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಬರ ಪರಿಹಾರ ಮತ್ತು ಬೆಳೆಹಾನಿ ಸಮೀಕ್ಷೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ವರದಿ ನೀಡಿದ್ದು, ಕೇಂದ್ರ ತಂಡದ ಭೇಟಿಯ ಬಳಿಕ ಅಧಿಕೃತವಾಗಿ ಬರ ಘೋಷಣೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

Tags:

error: Content is protected !!