Belagavi

ಕನಿಷ್ಠ ವೇತನ ಜಾರಿಗೆ ಸಿಐಟಿಯು ಆಗ್ರಹ: ಸರ್ಕಾರದ ನಡೆಗೆ ವರಲಕ್ಷ್ಮೀ ಆಕ್ರೋಶ

Share

ಕಳೆದ ಏಳೆಂಟು ವರ್ಷಗಳಿಂದ ವೇತನ ಪರಿಷ್ಕರಣೆ ಆಗದೇ ಕಾರ್ಮಿಕರು ಇತ್ತೀಚಿನ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಸಿಎಂ ಡಿ.ಕೆ.ಶಿವಕುಮಾರ ಅವರು ಕನಿಷ್ಟ ವೇತನವನ್ನು ತಡೆ ಹಿಡಿದು ಮತ್ತೊಂದು ಸಮಿತಿ ತಡೆ ಹಿಡಿದಿರುವುದು ಖಂಡನೀಯ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ ಹೇಳಿದರು.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯವು ಕೈಗಾರಿಕಾ ಅಭಿವೃದ್ಧಿಯಲ್ಲಿ 4ನೇ ಸ್ಥಾನ, ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ 2ನೇ ಸ್ಥಾನ ಹಾಗೂ ಐಟಿ, ಬಿಟಿ ಉದ್ದಿಮೆಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
ಕಳೆದ 2017ರಲ್ಲಿ ಕನಿಷ್ಠ ವೇತನ ಪರಿಷ್ಕರಣೆಯಾದಾಗ ಇದೇ ವಾರಗಳನ್ನು ಬಂಡವಾಳಿಗರು ಮಾಡಿದ್ದರು. 2017ರ ಕನಿಷ್ಠ ವೇತನ ಪರಿಷ್ಕರಣೆಯನ್ನು ದೇಶದ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ ಕನಿಷ್ಠ ವೇತನವನ್ನು ನಿಗದಿಪಡಿಸುವುದನ್ನು ನ್ಯಾಯಾಲ ಸಿಂಧುಗೊಳಿಸಿತ್ತು ಎಂದರು.
ನೀತಿ‌, ನಿಯೋಗವು ಕರ್ನಾಟಕದ ನಾವೀನ್ಯತೆಯಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ರಾಷ್ಟ್ರೀಯ ಮನ್ನಣೆಯನ್ನು ನೀಡಿದೆ. ಆದರೆ ಬಂಡವಾಳಿಗರು ವೇತನ ಕಡಿಮೆಯಾದ್ದಲ್ಲಿ ಮಾತ್ರ ಲಾಭ ಹೆಚ್ಚಾಗುತ್ತದೆ ಎಂದು ವಾದಿಸುತ್ತಾರೆ. ಕೂಡಲೇ ಸರಕಾರ ಕನಿಷ್ಠ ವೇತನವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜಾರಿ, ಜಿ.ಎಂ.ಜೈನೆಖಾನ್, ಮಂದಾ ನೆವಗಿ, ದೀಪಕ ವಾರ್ಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!