Chikkodi

ಚಿಕ್ಕೋಡಿ: ವಿದ್ಯುತ್ ಸ್ಪರ್ಶಿಸಿ ಮರಿ ಕೋತಿ ಸಾವು — ಮರಿಯನ್ನು ಎತ್ತಿಕೊಂಡು ತಾಯಿಯ ಕರುಣಾಜನಕ ಆಕ್ರಂದನ

Share

ವಿದ್ಯುತ್ ತಂತಿ ತಗುಲಿ ಮರಿ ಕೋತಿಯೊಂದು ದಾರುಣವಾಗಿ ಮೃತಪಟ್ಟಿದ್ದು, ಸತ್ತ ಮರಿಯನ್ನು ಬಿಟ್ಟಿರಲಾರದೆ ತಾಯಿ ಕೋತಿ ಗೋಳಾಡಿದ ಕರುಣಾಜನಕ ಘಟನೆ ಚಿಕ್ಕೋಡಿ ಪಟ್ಟಣದ ಹಾಲಟ್ಟಿ ಬಡಾವಣೆಯಲ್ಲಿ ನಡೆದಿದೆ.

ಹಾಲಟ್ಟಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಕೋತಿಗಳ ಗುಂಪಿನಲ್ಲಿದ್ದ ಮರಿ ಕೋತಿಯೊಂದು ವಿದ್ಯುತ್ ಕಂಬ ಹಾಗೂ ತಂತಿಯ ಸ್ಪರ್ಶಕ್ಕೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಆದರೆ, ತನ್ನ ಮರಿ ಸತ್ತುಹೋಗಿದೆ ಎಂಬುದನ್ನೂ ಅರಿಯದ ತಾಯಿ ಕೋತಿ, ಮರಿಯ ದೇಹವನ್ನು ಎತ್ತಿಕೊಂಡು ರಸ್ತೆಯುದ್ದಕ್ಕೂ ಅತ್ತಿತ್ತ ಅಲೆಯುತ್ತಾ ಆಕ್ರಂದನ ಮುಗಿಲುಮುಟ್ಟಿಸಿದೆ.

ಮರಿಯನ್ನು ಎದೆಗಪ್ಪಿಸಿಕೊಂಡು ಜೀವ ತರಲು ಯತ್ನಿಸುತ್ತಿದ್ದ ತಾಯಿ ಕೋತಿಯ ಗೋಳಾಟವನ್ನು ಕಂಡ ಸ್ಥಳೀಯರುಮರುಗಿದ್ದಾರೆ. ತಾಯಿಯ ವಾತ್ಸಲ್ಯ ಮತ್ತು ಮೂಕ ಪ್ರಾಣಿಯ ಕರುಣಾಜನಕ ಸ್ಥಿತಿಯನ್ನು ಕಂಡು ಹಲವರ ಕಣ್ಣಾಲಿಗಳು ತೇವಗೊಂಡವು.

ಸಾರ್ವಜನಿಕರು ತಾಯಿ ಕೋತಿಯಿಂದ ಮರಿಯ ದೇಹವನ್ನು ಬೇರ್ಪಡಿಸಲು ಶ್ರಮಿಸಿ, ಬಳಿಕ ಸತ್ತ ಮರಿ ಕೋತಿಗೆ ಸ್ಥಳೀಯರ ನೆರವಿನಿಂದ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!