ಕೋಟಬಾಗಿ ಎತ ನೀರಾವರಿ ಯೋಜನೆ ವ್ಯಾಪ್ತಿಯ ಕೊನೆಯ ಹಂತದ ಜಮೀನುಗಳಿಗೂ ನೀರು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಯುದ್ಧೋಪಾಧಿಕಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ. ರೈತರು ಆತಂಕಪಟ್ಟು ಸತ್ಯಾಗ್ರಹ ನಡೆಸುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟಪಡಿಸಿದ್ದಾರೆ.
ಕೋಟಬಾಗಿ ಎತ ನೀರಾವರಿ ಯೋಜನೆಯಡಿ ಸದ್ಯ ಎರಡು ಮೋಟಾರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಮಳೆಯ ಕಾರಣದಿಂದ ಕೊನೆಯ ಹಂತದ ಪ್ರದೇಶಗಳಿಗೆ ನೀರು ತಲುಪಿಸಲು ತುರ್ತಾಗಿ ಮತ್ತೂ ಎರಡು ಹೊಸ ಮೋಟಾರ್‌ಗಳ ಅವಶ್ಯಕತೆಯಿದೆ. ಈ ಕುರಿತು ಮುಖ್ಯ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ಈಗಾಗಲೇ ದುರಸ್ತಿಗೆ ಕಳುಹಿಸಲಾಗಿದ್ದು, ಸೆಪ್ಟೆಂಬರ್ 2 ಅಥವಾ 3ರೊಳಗೆ ಅವುಗಳನ್ನು ತರಿಸಿ ಸೆಪ್ಟೆಂಬರ್ 4 ಮತ್ತು 5ರೊಳಗೆ ಯಶಸ್ವಿಯಾಗಿ ಅಳವಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ, ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲರಿಗೂ ಸಮರ್ಪಕವಾಗಿ ನೀರು ಸಿಗುವಂತೆ ಜಿಲ್ಲಾ ಆಡಳಿತದಿಂದ ಅಗತ್ಯವಿರುವ ಎಲ್ಲ ರೀತಿಯ ನೆರವು ಹಾಗೂ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

