ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪುಸ್ತಕ ವಾಚನ ಅತ್ಯಗತ್ಯ, ಉತ್ತಮ ಪುಸ್ತಕಗಳ ಸಹವಾಸ ಯಶಸ್ವೀ ಜೀವನಕ್ಕೆ ಹಾದಿ ಮಾಡಿಕೊಡುತ್ತದೆ. ಬೆಳಗಾವಿಯ ಮಹಿಳಾ ವಿದ್ಯಾಲಯದಲ್ಲಿ ಜಾಯಂಟ್ಸ್ ಸಖಿ ಸಂಘಟನೆ ಆಯೋಜಿಸಿದ್ದ ಓದಿದರೇ ಮಾತ್ರ ಉಳಿವು’ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಮಾಯಪ್ಪ ಪಾಟೀಲ ಅವರು ವಿದ್ಯಾರ್ಥಿನಿಯರಿಗೆ ನೀಡಿದ ಪ್ರೇರಣಾದಾಯಿ ಸಂದೇಶವನ್ನು ನೀಡಿದರು.


ಬೆಳಗಾವಿಯ ಮಹಿಳಾ ವಿದ್ಯಾಲಯದಲ್ಲಿ ಜಾಯಂಟ್ಸ್ ಸಖಿ ವತಿಯಿಂದ ಆಯೋಜಿಸಲಾಗಿದ್ದ “ವಾಚಾಲ್ ತರ್ ವಾಚಾಲ್” ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಮಾಯಪ್ಪ ಪಾಟೀಲ ಅವರು ಪ್ರಮುಖ ವಕ್ತಾರರಾಗಿ ಭಾಗವಹಿಸಿ ಪ್ರೇರಣಾದಾಯಿ ಭಾಷಣ ಮಾಡಿದರು. ಡಿಜಿಟಲ್ ಯುಗದಲ್ಲಿ ಮೊಬೈಲ್ ಹಾಗೂ ಸೋಶಿಯಲ್ ಮೀಡಿಯಾ ಪ್ರಭಾವ ಹೆಚ್ಚಾಗಿದ್ದು, ಪುಸ್ತಕಗಳು ಧೂಳು ತಿನ್ನುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಹಾತ್ಮಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಸುಧಾ ಮೂರ್ತಿ ಹಾಗೂ ಮಾರ್ಕ್ ಝುಕರ್ಬರ್ಗ್ ಅವರ ಜೀವನ ಚರಿತ್ರೆಗಳನ್ನು ಉದಾಹರಿಸಿ ವಾಚನದ ಮಹತ್ವವನ್ನು ವಿವರಿಸಿದರು. ಪ್ರತಿಯೊಬ್ಬರೂ ದಿನನಿತ್ಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಯಂಟ್ಸ್ ಸಖಿ ಅಧ್ಯಕ್ಷೆ ಸುಲಕ್ಷಣಾ ಶಿನೋಳಕರ್ ವಹಿಸಿದ್ದರು. ವೇದಿಕೆಯಲ್ಲಿ ವಿಭಾಗೀಯ ನಿರ್ದೇಶಕ ಸಂಜಯ ಪಾಟೀಲ, ಫೆಡರೇಶನ್ ನಿರ್ದೇಶಕ ಸುನೀಲ ಮುತಗೆಕರ, ಅಪರ್ಣಾ ಪಾಟೀಲ ಹಾಗೂ ಮಹಿಳಾ ವಿದ್ಯಾಲಯದ ಮುಖ್ಯೋಪಾಧ್ಯಾಯ ಕೃಷ್ಣಾಜಿ ಪಾಟೀಲ ಉಪಸ್ಥಿತರಿದ್ದು ಮನೋಗತ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿನಿಯರ ಜೊತೆಗೆ ಜಾಯಂಟ್ಸ್ ಸಖಿಯ ಮಾಜಿ ಅಧ್ಯಕ್ಷೆ ಶೀತಲ ಪಾಟೀಲ, ಉಪಾಧ್ಯಕ್ಷೆ ರಾಜಶ್ರೀ ಹಸಬೆ, ಸ್ವಾತಿ ಫಡಕೆ, ಅರ್ಚನಾ ಕಂಗ್ರಾಳಕರ, ವೈಶಾಲಿ ಭಾತಕಾಂಡೆ, ವರದಾ ಅಂಗಡಿ, ಸುವರ್ಣಾ ಕಾಳೆ, ಸುಲೋಚನಾ ಕುಟ್ರೇ, ಶೀತಲ ನೇಸರೀಕರ, ನೀಲಿಮಾ ಕರಂಜೀಕರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ದೀಪಾ ಪಾಟೀಲ ನೆರವೇರಿಸಿದರು.


