ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಜೀವಿಕಾ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದ ಶ್ರಮಿಕರಿಗೆ ಮತ್ತಷ್ಟು ಆರ್ಥಿಕ ಭದ್ರತೆ ನೀಡುವ ನಿಟ್ಟಿನಲ್ಲಿ ವಾರ್ಷಿಕ ಉದ್ಯೋಗದ ಮಾನವ ದಿನಗಳ ಸಂಖ್ಯೆಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಯಶವಂತ ಕುಮಾರ ತಿಳಿಸಿದ್ದಾರೆ.

ತಾಲೂಕಿನಲ್ಲಿ ಒಟ್ಟು 48039 ಸಕ್ರಿಯ ಕೂಲಿ ಕಾರ್ಮಿಕರಿದ್ದು, ಒಟ್ಟಾರೆ 98.69 ಪ್ರತಿಶತ ಇಕೆವೈಸಿ ಪ್ರಗತಿ ಸಾಧಿಸಲಾಗಿದೆ, ಬಾಕಿ ಉಳಿದ ಕೂಲಿಕಾರ್ಮಿಕರ ಇಕೆವೈಸಿ ಮಾಡಿ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ. ಜುಲೈ 1 ರಿಂದ ರಾಜ್ಯಾದ್ಯಂತ ಜಾರಿಗೆ ಬಂದಿರುವ ಈ ಯೋಜನೆಯಲ್ಲಿ ದಿನದ ಕೂಲಿ ದರವನ್ನು ಈ ಹಿಂದೆ ಇದ್ದ ರೂ.370 ನ್ನು ಹೆಚ್ಚಿಸಿ ರೂ. 382 ಕ್ಕೆ ನಿಗದಿಪಡಿಸಲಾಗಿದೆ. ರೈತರು ಹಾಗೂ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆಯ ನಿಯಮಾವಳಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದ್ದು, ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಲು ಕೋರಲಾಗಿದೆ.
ಕೃಷಿ ಕೆಲಸಗಳಿಗೆ ಆದ್ಯತೆ: ರೈತರು ಹಾಗೂ ಕೂಲಿ ಕಾರ್ಮಿಕರು ಕೃಷಿ ಕಾಮ ಗಾರಿಗಳಲ್ಲಿ (ಬಿತ್ತನೆ, ಕೊಯ್ದು ಇತ್ಯಾದಿ) ತೊಡಗಿಸಿಕೊಳ್ಳುವ ಪ್ರಮುಖ ಅವಧಿ ಯನ್ನು ಪರಿಗಣಿಸಿ, 60 ದಿನಗಳವರೆಗೆ ಈ ಯೋಜನೆಯ ಕೆಲಸಗಳನ್ನು ತಡೆ ಹಿಡಿಯಲು ಅವಕಾಶ ಕಲ್ಪಿಸಲಾಗಿದೆ.
ಕೃಷಿ ಹಂಗಾಮಿನ ಕೆಲಸಗಳು ಮುಗಿದ ನಂತರ, ಗ್ರಾಮೀಣ ಶ್ರಮಿಕರಿಗೆ ಮುಂದಿನ ದಿನಗಳಲ್ಲಿ ಯಥಾಪ್ರಕಾರವಾಗಿ ಬಾಕಿ ಉಳಿದ ದಿನಗಳ ಕೆಲಸ ಮತ್ತು ಸೌಲಭ್ಯಗಳನ್ನು ಒದಗಿಸಿಕೊಡಲಾ ಗುವುದು. ಇದರಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಪ್ರತಿ ಕುಟುಂಬಕ್ಕೆ ಈ ಹಿಂದೆ ಇದ್ದ 100 ದಿನಗಳ ಬದಲಾಗಿ, ಈಗ 125
ದಿನಗಳ ಉದ್ಯೋಗದ ಗ್ಯಾರಂಟಿ ಇರಲಿದೆ. ಯೋಜನೆಯಡಿ ಮಹಿಳಾ ಮತ್ತು ಪುರುಷ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ರೂ. 382 ಒದಗಿಸಲಾಗುವುದು.
ಡಿಜಿಟಲ್ ಹಾಜರಾತಿ: ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಎನ್.ಎಂ.ಎಂ. ಎಸ್ ಮೊಬೈಲ್ ಆ್ಯಪ್ ಮೂಲಕ ಎರಡು ಹಂತದ ಹಾಜರಾತಿಯನ್ನು ಪಡೆ ಯಲಾಗುವುದು ಹಾಗೂ ನಿಗದಿಪಡಿ ಸಿದ ಅಳತೆಯ ಆಧಾರದ ಮೇಲೆಯೇ ನಿಗದಿತ ಕೂಲಿಯನ್ನು ಪಾವತಿಸಲಾಗುವುದು. ಪ್ರತಿ ಕಾಮಗಾರಿ ಸ್ಥಳದಲ್ಲೂ ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಶುದ್ದ ಕುಡಿಯುವ ನೀರು, ನೆರಳಿನ ಸೌಲಭ್ಯಗಳನ್ನು ಒದಗಿಸಲಾಗುವುದು.
ಸರ್ಕಾರದ ಈ ಮಹತ್ತರ ಆರ್ಥಿಕ ಸಬಲೀಕರಣ ಯೋಜನೆಗೆ ಎಲ್ಲಾ ಗ್ರಾಮೀಣ ಕೂಲಿ ಕಾರ್ಮಿಕರು ಮತ್ತು ರೈತ ಬಾಂಧವರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿ, ಕೈಜೋಡಿಸಬೇಕು. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿ ವಿಕಸಿತ ಭಾರತ್ ಗ್ಯಾರಂಟಿ ಕಾರ್ಡ (ಜಾಬ್ ಕಾರ್ಡ) ಪಡೆದುಕೊಳ್ಳಲು ಅಥವಾ ನವೀಕರಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
