ಖಾನಾಪೂರ ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವು ಶನಿವಾರ, ಜುಲೈ 11, 2026ರಂದು ಬೆಳಿಗ್ಗೆ 11 ಗಂಟೆಗೆ ಪಾರಿಶ್ವಾಡ ಕ್ರಾಸ್ನಲ್ಲಿರುವ ಮಧುವನ ಹಾಲ್ನಲ್ಲಿ ಆಯೋಜಿಸಲಾಗಿದೆ.

ಈ ಸಮಾರಂಭದಲ್ಲಿ ಲಯನ್ಸ್ ಕ್ಲಬ್ನ 2025–26ನೇ ಸಾಲಿನ ಡಿಸ್ಟ್ರಿಕ್ಟ್ ಗವರ್ನರ್ ಶ್ರೀ ಶ್ರೀನಿವಾಸ ಶಿವಣಗಿ ಅವರಿಂದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷ ಡಿ. ಪಿ. ವಾಗಳೆ ವಹಿಸಲಿದ್ದಾರೆ.
ಈ ವರ್ಷ ಕ್ಲಬ್ನ ಅಧ್ಯಕ್ಷರಾಗಿ ಚಾರ್ಟರ್ಡ್ ಅಕೌಂಟೆಂಟ್ ಲಯನ್ ವಿನಯ ಹಿರೇಮಠ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಲಯನ್ ರವಿ ಸಾಗರ್ ಉಪಿನ್, ಹಾಗೂ ಸತತ ನಾಲ್ಕನೇ ಬಾರಿಗೆ ಖಜಾಂಚಿಯಾಗಿ ಲಯನ್ ಭಾವು ಚವ್ಹಾಣ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಲಯನ್ಸ್ ಕ್ಲಬ್ನ ಎಲ್ಲಾ ಸದಸ್ಯರು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನಿವೃತ್ತ ಅಧ್ಯಕ್ಷ ಲಯನ್ ವಿಕಾಸ್ ಕಲ್ಯಾಣಿ ಅವರು ಮನವಿ ಮಾಡಿದ್ದಾರೆ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
