ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲಿ ನ ಹಾಗೂ ಮಹಾನಗರಕ್ಕೆ ಹೊಂದಿಕೊಂಡಿರುವ ಅಲಾರವಾಡ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಅಲಾರವಾಡ ಗ್ರಾಮದ ಯುವಕರು ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ತಿ ಮಾಡುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದ್ದಾರೆ.


ಬೆಳಗಾವಿ ನಗರದ ಹಳೆ ಪಿ.ಬಿ.ರಸ್ತೆ ಯಡಿಯೂರಪ್ಪ ಮಾರ್ಗದ ಮುಖಾಂತರ ರಾಷ್ಟ್ರೀಯ ಹೆದ್ದಾರಿಯನ್ನು ಸೇರುವ ಸರ್ವಿಸ್ ರಸ್ತೆಯು ಕಳೆದ ಹಲವಾರು ದಿನಗಳಿಂದ ಹಾಳಾಗಿತ್ತು.ಇಂತಹ ಪರಿಸ್ಥಿತಿಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಭಾರಿ ಮಳೆ ಬಂದ ಕಾರಣ ಉಳಿದ ರಸ್ತೆ ಸಂಪೂರ್ಣ ಕೆಟ್ಟು ಹೋಗಿ ದೊಡ್ಡ ದೊಡ್ಡ ಗುಂಡಿಗಳು ಆಗಿದ್ದವು.
ವಾಹನ ಚಾಲಕರು ಈ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸಲು ಹರಸಾಹಸ ಪಡೆಬೇಕಾಗಿತ್ತು. ಕೆಲವೊಂದು ಬಾರಿ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿದ್ದವು.
ಇಂತಹ ಪರಿಸ್ಥಿತಿಯಲ್ಲಿ ಈ ರಸ್ತೆ ರಿಪೇರಿ ಮಾಡಬೇಕೆಂದು ಆಗ್ರಹಿಸಿ ಹಲವಾರು ಬಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಈ ಭಾಗದ ನಗರ ಸೇವಕರಿಗೆ ಮನವಿ ಮಾಡಿದರೂ ಸಹ ಯಾರು ಗಂಭೀರವಾಗಿ ಪರಿಗಣಿಸಲಿಲ್ಲ.
ಕೊನೆಗೆ ಅಲಾರವಾಡ ಗ್ರಾಮದ ಯುವಕರೆಲ್ಲರೂ ಒಂದೆಡೆ ಸೇರಿ ತಾವೆ ಖುದ್ದಾಗಿ ರಸ್ತೆಗಿಳಿದು ರಸ್ತೆ ರೀಪೆರಿ ಮಾಡಿ ರಸ್ತೆಯಲ್ಲಿರುವ ಎಲ್ಲ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನಕೂಲ ಮಾಡಿಕೊಟ್ಟಿದ್ದಾರೆ. ಅಲಾರವಾಡ ಗ್ರಾಮದ
ಯುವಕರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
