Khanapur

ಕಕ್ಕೇರಿಯಿಂದ ಧಾರವಾಡಕ್ಕೆ ನೂತನ ಬಸ್ ಸೇವೆ ಆರಂಭ; ಕಕ್ಕೇರಿಯಲ್ಲಿ ಸಂಭ್ರಮ!

Share

ಸ್ಥಳೀಯ ಗ್ರಾಮಸ್ಥರ ದೀರ್ಘಕಾಲದ ಬೇಡಿಕೆಯಾಗಿದ್ದ ಕಕ್ಕೇರಿಯಿಂದ ಧಾರವಾಡಕ್ಕೆ ಹೊಸ ಬಸ್ ಸೇವೆಗೆ ಚಾಲನೆ ಸಿಕ್ಕಿದೆ. ಖಾನಾಪುರ ತಾಲೂಕಿನ ಬಿಷ್ಟಾದೇವಿ ಮಂದಿರದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಅಧ್ಯಕ್ಷ ಯಲ್ಲಪ್ಪ ಗುಪಿತ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಇದೇ ವೇಳೆ ವಿವಿಧ ರೈತಪರ ಬೇಡಿಕೆಗಳ ಈಡೇರಿಕೆಗೆ ಮುಖಂಡರು ಆಗ್ರಹಿಸಿದ್ದಾರೆ.

ಅಖಿಲ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಿಶೋರ ಮಿಠಾರಿ ಹಾಗೂ ರೈತ ಮುಖಂಡರ ಸತತ ಹೋರಾಟದ ಫಲವಾಗಿ ಹಳಿಯಾಳ ಘಟಕದ ಈ ನೂತನ ಬಸ್ ಸಂಚಾರ ಪ್ರಾರಂಭಗೊಂಡಿದೆ. ಕಾರ್ಯಕ್ರಮದಲ್ಲಿ ಬಿಷ್ಟಪ್ಪ ಕೆದಾರ್ಜಿ ಪೂಜೆ ನೆರವೇರಿಸಿದರೆ, ಬಸ್ ಚಾಲಕ ಯಲ್ಲಪ್ಪ ದೊಡಮನಿ ಹಾಗೂ ನಿರ್ವಾಹಕ ಶಿವಾನಂದ ತೇಲಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಮಾತನಾಡಿದ ಕಿಶೋರ ಮಿಠಾರಿ, ಮಲಪ್ರಭಾ ನದಿಗೆ ಆಣೆಕಟ್ಟು ನಿರ್ಮಿಸಿ ತಾಲೂಕಿನಾದ್ಯಂತ ನೀರಾವರಿ ಕಲ್ಪಿಸುವುದು, ಕಕ್ಕೇರಿಗೆ ಸರ್ಕಾರಿ ಕಾಲೇಜು, 30 ಹಾಸಿಗೆ ಆಸ್ಪತ್ರೆ, ಉಪ ಪೊಲೀಸ್ ಠಾಣೆ ಮಂಜೂರು ಮಾಡುವುದು ಹಾಗೂ ಪ್ರಸ್ತುತ ಮಳೆ ಅಭಾವದಿಂದ ರಾಜ್ಯವನ್ನು ಬರಗಾಲ ಪೀಡಿತ ಎಂದು ಘೋಷಿಸಿ ಎಕರೆಗೆ 30 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ, ನಿವೃತ್ತ ಶಿಕ್ಷಕ ಡಿ.ಕೆ. ಫಿರೋಜಿ, ಆರ್. ವೈ. ಬೆನ್ನೂರ, ಬಸವಣ್ಣಿಪ್ಪ ಅಗಸಿಮನಿ, ಸಂತೋಷ ಕುಕಡೊಳ್ಳಿ, ರಾಜು ದೇಗಾಂವಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!