Belagavi

ಖಾನಾಪೂರ ಪ್ರಗತಿಗೆ ಶಾಸಕ ವಿಠ್ಠಲ ಹಲಗೇಕರ್ ಮಾಸ್ಟರ್ ಪ್ಲಾನ್: ಸಿಎಂ ಡಿ.ಕೆ. ಶಿವಕುಮಾರ್‌ಗೆ ಮನವಿ!

Share

ಖಾನಾಪೂರ ತಾಲೂಕಿನ ದೀರ್ಘಕಾಲದ ಸಮಸ್ಯೆಗಳ ಪರಿಹಾರ ಹಾಗೂ ಸಮಗ್ರ ಪ್ರಗತಿಗಾಗಿ ಶಾಸಕ ವಿಠ್ಠಲ ಹಲಗೇಕರ್ ಅವರು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಕೋಟ್ಯಂತರ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮನವಿ ಸಲ್ಲಿಸಿದ್ದಾರೆ.

ಶಾಸಕ ವಿಠ್ಠಲ ಹಲಗೇಕರ್ ಅವರು ಸಲ್ಲಿಸಿದ ಮನವಿಯಲ್ಲಿ, ತಾಲೂಕಿನ ನೀರಾವರಿ ಯೋಜನೆಗಳಿಗಾಗಿ ೧೦೦ ಕೋಟಿ ರೂ., ಪಾರೀಶ್ವಾಡ-ಅವರೋಳಿ ಯೋಜನೆಗೆ ೫೦ ಕೋಟಿ ರೂ. ಹಾಗೂ ಜಳಗಾ, ಶೇಡೇಗಾಳಿ, ನಿಲಾವಡೆ ಮತ್ತು ತೋರಳಿ ಗ್ರಾಮಗಳ ನದಿ ಯೋಜನೆಗಳಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ನೀಡುವಂತೆ ಕೋರಿದ್ದಾರೆ. ಜೊತೆಗೆ, ಅರಣ್ಯ ಹಾಗೂ ಅತಿವೃಷ್ಟಿ ಪ್ರದೇಶವಾದ ಖಾನಾಪೂರದಲ್ಲಿ ವಿದ್ಯುತ್ ವ್ಯತ್ಯಯ ತಡೆಯಲು ಭೂಗತ ಕೇಬಲ್ (UG Cable) ಅಳವಡಿಕೆ, ಬೈಲೂರು-ಕಣಕುಂಬಿಗಳಲ್ಲಿ ಹೊಸ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ ಮತ್ತು ಭೌಗೋಳಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಾಂಬೋಟಿ ಹಾಗೂ ಕುಂಬಾರ್ಡಾ ಗ್ರಾಮಗಳಲ್ಲಿ ತುರ್ತಾಗಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡುವಂತೆ ಸಿಎಂ ಅವರಿಗೆ ಒತ್ತಾಯಿಸಿದರು; ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ತಾಲೂಕಿನ ಅಭಿವೃದ್ಧಿಗೆ ಅಗತ್ಯ ಧನಸಹಾಯ ಮತ್ತು ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ.

– ಅಲ್ತಾಫ್ ಎಂ ಬಸರೀಕಟ್ಟಿ, ಇನ್ ನ್ಯೂಸ್ ಖಾನಾಪೂರ

Tags:

error: Content is protected !!