ಬಿಎಸ್‌ಎನ್‌ಎಲ್ ಸಿಬ್ಬಂದಿ ಮತ್ತು ಪಿಂಚಣಿದಾರರು ತಮ್ಮ ದೀರ್ಘಕಾಲದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸುದೀರ್ಘ 9 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವೇತನ ಪರಿಷ್ಕರಣೆ ಮತ್ತು 4G ಸೇವೆ ಪ್ರಾರಂಭ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಕುರಿತು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಸ್ಪಂದಿಸದಿದ್ದರೆ ದೆಹಲಿಯ ಸಂಸತ್ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.

ಬೆಳಗಾವಿಯಲ್ಲಿ ಬಿಎಸ್‌ಎನ್‌ಎಲ್ ವಿವಿಧ ಸಂಘಟನೆಗಳ ಒಕ್ಕೂಟದ (Co-ordination Committee) ವತಿಯಿಂದ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಸಿಬ್ಬಂದಿ ಮತ್ತು ಪಿಂಚಣಿದಾರರ 3ನೇ ವೇತನ ಪರಿಷ್ಕರಣೆ, ಪಿಂಚಣಿ ಪರಿಷ್ಕರಣೆ ಮತ್ತು ‘ಆಫೋರ್ಡಬಿಲಿಟಿ ಕ್ಲಾಸ್’ ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿವೆ.
ಬಿಎಸ್‌ಎನ್‌ಎಲ್ ಸಿಬ್ಬಂದಿ ಹಾಗೂ ಪಿಂಚಣಿದಾರರ 3ನೇ ವೇತನ ಪರಿಷ್ಕರಣೆ, ಪಿಂಚಣಿ ಪರಿಷ್ಕರಣೆ, ಆಫೋರ್ಡಬಿಲಿಟಿ ಕ್ಲಾಸ್ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಎಸ್‌ಎನ್‌ಎಲ್ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಳಗಾವಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಖಾಸಗಿ ಟೆಲಿಕಾಂ ಕಂಪನಿಗಳಿಗೆ ನೀಡಿದಂತೆ ಬಿಎಸ್‌ಎನ್‌ಎಲ್‌ಗೂ ಹೊರಗಿನಿಂದ ಉಪಕರಣಗಳನ್ನು ಖರೀದಿಸಲು ಅನುಮತಿ ನೀಡಬೇಕು, ಶೀಘ್ರವೇ 4G ಸೇವೆ ಪೂರ್ಣಪ್ರಮಾಣದಲ್ಲಿ ಆರಂಭಿಸಬೇಕು. ಸರ್ಕಾರ ಹಾಗೂ ಆಡಳಿತ ಮಂಡಳಿ ಕಳೆದ 9 ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಈಡೇರಿಸದೆ ವಿಳಂಬ ಮಾಡುತ್ತಿದೆ. ಒಂದು ವೇಳೆ ಈ ಪ್ರತಿಭಟನೆಗೂ ಸ್ಪಂದಿಸದಿದ್ದರೆ, ಮುಂಬರುವ ಆಗಸ್ಟ್ 7 ರಂದು ದೆಹಲಿಯಲ್ಲಿ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅರವಿಂದ ಚೌಗುಲೆ ಎಚ್ಚರಿಸಿದ್ದಾರೆ.
ವೇತನ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆ ಸಮಯಕ್ಕೆ ಸರಿಯಾಗಿ ನಡೆದಿಲ್ಲ. ಸರ್ಕಾರ ಬಿ.ಎಸ್.ಎನ್.ಎಲ್ ಲಾಭದಾಯಕವಾಗಿಲ್ಲ ಎಂಬ ಕಾರಣವನ್ನು ಮುಂದಿಡಲಾಗುತ್ತಿದೆ. ಆದರೇ, ಇದು ಸಿಬ್ಬಂದಿಯ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಎಲ್ಲೆಡೆ ಸೇವೆಯನ್ನು ಹೆಚ್ಚಿಸಿದರೇ, ಲಾಭವನ್ನು ಗಳಿಸಬಹುದಾಗಿದೆ. ಆದರೇ, ಇದಕ್ಕೆ ಅಡ್ಡಿಯನ್ನುಂಟು ಮಾಡಲಾಗುತ್ತಿದೆ. ಸರ್ಕಾರದ ಧೋರಣೆಯಿಂದಲೇ ಲಾಭದಿಂದ ದೂರ ಉಳಿಯುವಂತಾಗಿದೆ. ಬಿ.ಎಸ್.ಎನ್.ಎಲ್’ಗೆ ಪ್ರಾತಿನಿಧ್ಯ ನೀಡದೇ, ಖಾಸಗಿ ಕಂಪನಿಗಳಿಗೆ ಪ್ರಾತಿನಿಧ್ಯ ನೀಡಲಾಗುತ್ತಿದೆ. 9 ವರ್ಷಗಳಿಂದ ಪರಿತಪಿಸುತ್ತಿರುವ ಸಿಬ್ಬಂದಿಗಳ ಸಮಸ್ಯೆಯನ್ನು ಪರಿಹರಿಸಿದರೇ, ದೇಶ ಪ್ರಗತಿಯನ್ನು ಸಾಧಿಸಲಿದೆ ಎಂದು ರಾಮು ತಟಪಟಿ ಅವರು ಹೇಳಿದರು.
ಈ ವೇಳೆ ಬಿಎಸ್‌ಎನ್‌ಎಲ್ ಸಿಬ್ಬಂದಿ ಮತ್ತು ಪಿಂಚಣಿದಾರರು ಭಾಗಿಯಾಗಿದ್ಧರು.
