Belagavi

ಜುಲೈ 18ರಂದು ಬೆಳಗಾವಿಯಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ಕ್ಯಾಬಿನೆಟ್ ಪದಗ್ರಹಣ: ಗವರ್ನರ್ ರಾಜಶೇಖರ ಹಿರೇಮಠ

Share

65 ವರ್ಷಗಳ ಇತಿಹಾಸ ಹೊಂದಿರುವ ಲಯನ್ಸ್ ಕ್ಲಬ್ ಆಫ್ ಬೆಳಗಾವಿ ಸೀನಿಯರ್ ಕ್ಲಬ್ ವತಿಯಿಂದ ಜುಲೈ 18ರಂದು ಜಿಲ್ಲಾ 317Bರ ಜಿಲ್ಲಾ ಕ್ಯಾಬಿನೆಟ್ ಪದಗ್ರಹಣ ಸಮಾರಂಭವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಗವರ್ನರ್ ಲಯನ್ ರಾಜಶೇಖರ ಹಿರೇಮಠ ತಿಳಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಒಳಗೊಂಡ ಜಿಲ್ಲಾ 317Bರಲ್ಲಿ 3,862 ಲಯನ್ಸ್ ಸದಸ್ಯರಿದ್ದು, ಕಾರ್ಯಕ್ರಮದಲ್ಲಿ ಸುಮಾರು 1,000ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾವು ವಹಿಸಲಿದ್ದು, ದೆಹಲಿಯ ಅಂತರರಾಷ್ಟ್ರೀಯ ನಿರ್ದೇಶಕ ಲಯನ್ ವಿನಯ್ ಮಿತ್ತಲ್ ಅವರು ಮುಖ್ಯ ಅತಿಥಿಯಾಗಿ ಹಾಗೂ ಪದಗ್ರಹಣಾಧಿಕಾರಿಯಾಗಿ ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ಲಯನ್ಸ್ ಕ್ಲಬ್‌ನಿಂದ ನಾಲ್ಕನೇ ಜಿಲ್ಲಾ ಗವರ್ನರ್ ಆಗಿರುವ ತಾವು ಹಾಂಗ್‌ಕಾಂಗ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಅಧಿಕಾರ ಸ್ವೀಕರಿಸಿದ್ದು, ಇದೀಗ ಜಿಲ್ಲಾ ಕ್ಯಾಬಿನೆಟ್ ಪದಗ್ರಹಣ ಸಮಾರಂಭವನ್ನು ಬೆಳಗಾವಿಯಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು. BYTE

ವಿಶ್ವದ 210ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಯನ್ಸ್ ಕ್ಲಬ್‌ಗಳು ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಜನಸೇವೆಯಲ್ಲಿ ತೊಡಗಿವೆ. ಬೆಳಗಾವಿಯ ನಾಲ್ಕು ಲಯನ್ಸ್ ಕ್ಲಬ್‌ಗಳು ಅನ್ನದಾಸೋಹ, ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಗಳು, ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿವೆ ಎಂದು ವಿವರಿಸಿದರು.
ಕಳೆದ ವರ್ಷ ಕ್ಯಾಂಟೋನ್ಮೆಂಟ್ ಪ್ರದೇಶದಲ್ಲಿದ್ದ ಶತಮಾನ ಹಳೆಯ ಬಾವಿಯನ್ನು ಸುಮಾರು ₹2 ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗಿದ್ದು, ಇದೀಗ ಸುಮಾರು 200 ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯುತ್ತಿದೆ. ಅಲ್ಲದೆ, ಜಿಲ್ಲಾ ಕ್ಯಾಬಿನೆಟ್ ಪದಗ್ರಹಣದ ಅಂಗವಾಗಿ ಮಲ್ಟಿಪಲ್ ಡಿಸ್ಟ್ರಿಕ್ಟ್ 317 ವತಿಯಿಂದ ಸುಸಜ್ಜಿತ ಮೊಬೈಲ್ ರಕ್ತದಾನ ಘಟಕವನ್ನು ನೀಡಲಾಗುತ್ತಿದ್ದು, ಇದು ಜಿಲ್ಲೆಯಾದ್ಯಂತ ರಕ್ತಸಂಗ್ರಹ ಹಾಗೂ ರಕ್ತಬ್ಯಾಂಕ್ ಸೇವೆಗೆ ಬಳಸಲಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ 114 ಲಯನ್ಸ್ ಕ್ಲಬ್‌ಗಳು, 26 ಲಿಯೋ ಕ್ಲಬ್‌ಗಳ ಪ್ರತಿನಿಧಿಗಳು, ಮಾಜಿ ಅಂತರರಾಷ್ಟ್ರೀಯ ನಿರ್ದೇಶಕರು, ವಿವಿಧ ಜಿಲ್ಲೆಗಳ ಜಿಲ್ಲಾ ಗವರ್ನರ್‌ಗಳು ಹಾಗೂ 25 ಮಾಜಿ ಜಿಲ್ಲಾ ಗವರ್ನರ್‌ಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗಾಗಿ ಬೆಳಗಾವಿ ಹಾಗೂ ಖಾನಾಪುರದ ಲಯನ್ಸ್ ಕ್ಲಬ್‌ಗಳ ಸದಸ್ಯರು ಲಯನ್ ಶ್ರೀಧರ ಉಪ್ಪಿನ್ ಅವರ ನೇತೃತ್ವದಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ ಎಂದರು. BYTE

ಪತ್ರಿಕಾಗೋಷ್ಠಿಯಲ್ಲಿ ಲಯನ್ ಶ್ರೀನಿವಾಸ್ ಶಿವಾಂಗಿ, ಲಯನ್ ಮೋನಿಕಾ ಸಾವಂತ್, ಲಯನ್ ಸತೀಶ್ ಪಾಟೀಲ, ಲಯನ್ ಅಶೋಕ್ ಕಟವೆ, ಲಯನ್ ಹೇಮಂತ ಕಿತ್ತೂರು, ಲಯನ್ ದಿನೇಶ್ ಭಿರ್ಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!