ಸದಲಗಾ ಠಾಣೆ ಪೊಲೀಸರು, ಅಂತರರಾಜ್ಯ ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಅಂದಾಜು 2,00,000 ಮೌಲ್ಯದ ಒಟ್ಟು 05 ಮೋಟಾರ್ ಸೈಕಲ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಶುಭಂ ರಾಜು ಮನ್ನೋಳಿ ಚಿಕ್ಕೋಡಿ ತಾಲೂಕಿನ ಶಮನೇವಾಡಿ ಗ್ರಾಮದವರು ಹಾಗೂ
ಆಕಾಶ ಪ್ರಕಾಶ ವಡೇರ ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಪಾತಕಣಂಗಲೆ ತಾಲೂಕಿನ ಆಳತೆ ಗ್ರಾಮದವರು ಎಂದು ತಿಳಿದು ಬಂದಿದೆ.
ದಿನಾಂಕ 22.07.2026 ರಂದು ಸದ್ಧಲಗಾ ಪೊಲೀಸ್ ಠಾಣೆಯ ಸಿಎಚ್ಸಿ- 1189 ಯು. ಎಮ್. ಕಾಂಬಳೆ ಅವರು ನೀಡಿದ ದೂರಿನನ್ವಯ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಅವರಿಂದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಡಿ.ಎಸ್.ಪಿ ಚಿಕ್ಕೋಡಿ ಗೋಪಾಲಕೃಷ್ಣ ಗೌಡರ ಹಾಗೂ ಚಿಕ್ಕೋಡಿ ವೃತ್ತದ ಸಿ.ಪಿ.ಐ ವಿಶ್ವನಾಥ ಚೌಗಲೆ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ತನಿಖಾ ತಂಡದಲ್ಲಿ ಸದಲಗಾ ಠಾಣೆಯ ಪಿ.ಎಸ್.ಐ ಶಿವಕುಮಾರ್ ಬಿರಾದಾರ,ಪ್ರೊ. ಪಿ.ಎಸ್.ಐ ಐ. ಕೆ. ಗೌಡನವರ ವೈ. ಎಸ್. ಕುರಲಿ ಹಾಗೂ ಸಿಬ್ಬಂದಿಗಳಾದ ಎಸ್. ಎನ್. ಬಡೋಡೆ, ಯು. ಎಮ್. ಕಾಂಬಳೆ, ವಿ. ಕೆ. ಕುಂಬಾರ, ವಿ. ಜಿ. ಹಳಬರ, ಸಿ. ಎಲ್. ಪೂಜೇರಿ, ಐ. ವಿ. ಘಂಟಿ, ಬಿ. ಕೆ. ಗೊಲಬಾವಿ, ಎಸ್. ಎಚ್. ಕುಂಬಾರ ಹಾಗೂ ತನಿಖಾ ಸಹಾಯಕರಾದ ಎಸ್. ಎಲ್. ಬಾಡಕರ, ಆರ್. ಎಮ್. ಮುಜಾವರ, ಕೆ. ವಿ. ಬೆಳಕೇರಿ, ಕೆ. ಎಸ್. ಮಧೂರ ಮತ್ತು ಬೆಳಗಾವಿ ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ ಭಾಗವಹಿಸಿದ್ದರು.
ಅಂತರರಾಜ್ಯ ಕಳ್ಳರ ಜಾಲವನ್ನು ಭೇದಿಸಿ, ಯಶಸ್ವಿ ಕಾರ್ಯಾಚರಣೆ ನಡೆಸಿದ ಇಡೀ ತಂಡವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ರಾಮರಾಜನ್ ಅವರು ಮುಕ್ತಕಂಠದಿಂದ ಪ್ರಶಂಸಿದ್ದಾರೆ.
