Bailahongala

ಬೆಳಗಾವಿ: ಚಿಕ್ಕಬಾಗೇವಾಡಿಯಲ್ಲಿ ಮಂಗಗಳ ಅಟ್ಟಹಾಸ, ಬೆಳೆ-ಮನೆ ಹಾನಿ: ಜಮೀನಿಗೆ ಇಳಿಯಲು ರೈತರಲ್ಲಿ ಭಯ!

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಮಂಗಗಳ ಕಾಟ ಮಿತಿಮೀರಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ. ಹಿಂಡು ಹಿಂಡಾಗಿ ಆಗಮಿಸುತ್ತಿರುವ ಮಂಗಗಳು ಮನೆಗಳ ಮೇಲ್ಚಾವಣಿ ಮೇಲೆ ಎಗರಾಡಿ ಹಂಚುಗಳನ್ನು ಒಡೆದು ಅಪಾರ ಪ್ರಮಾಣದ ಹಾನಿ ಉಂಟುಮಾಡುತ್ತಿವೆ. ಇದರಿಂದಾಗಿ ಮನೆಯೊಳಗೆ ನೆಮ್ಮದಿಯಿಂದ ಇರಲಾಗದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಗ್ರಾಮದಲ್ಲಿ ನೆಮ್ಮದಿಯ ವಾತಾವರಣವೇ ಇಲ್ಲದಂತಾಗಿದೆ.

ಮತ್ತೊಂದೆಡೆ, ಜಮೀನುಗಳಿಗೆ ನುಗ್ಗುತ್ತಿರುವ ಮಂಗಗಳಂಡು ರೈತರು ಕಷ್ಟಪಟ್ಟು ಬೆಳೆದ ಸೋಯಾಬೀನ್ ಸೇರಿದಂತೆ ಸಾಲು ಸಾಲು ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿವೆ. ರೈತರು ತೀವ್ರ ಆರ್ಥಿಕ ನಷ್ಟ ಎದುರಿಸುವಂತಾಗಿದ್ದು, ಕೃಷಿ ಭೂಮಿಗೆ ತೆರಳಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಉಪದ್ರವ ನೀಡುತ್ತಿರುವ ಮಂಗಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Tags:

error: Content is protected !!