Belagavi

ಬೆಳಗಾವಿ: ವಾರ್ಡ್ ನಂ. 33 ರಲ್ಲಿ ಬಿಜೆಪಿ ‘ಮಹಾಅಭಿಯಾನ ಜನಸಂಪರ್ಕ’ ಕಾರ್ಯಕ್ರಮ

Share

ಬೆಳಗಾವಿ ನಗರದ ವಾರ್ಡ್ ಸಂಖ್ಯೆ 33ರ ಮಾರ್ಕಂಡೇಯ ನಗರದಲ್ಲಿ ಬಿಜೆಪಿ ವತಿಯಿಂದ ‘ಮಹಾಅಭಿಯಾನ ಜನಸಂಪರ್ಕ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಜಿ ಶಾಸಕ ಸಂಜಯ ಪಾಟೀಲ್ ಹಾಗೂ ಪ್ರಮುಖ ಮುಖಂಡರು ಭಾಗವಹಿಸಿ, ಮನೆ ಮನೆಗೆ ತೆರಳಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.

ಬೆಳಗಾವಿಯ ಮಾರ್ಕಂಡೇಯ ನಗರದ ವಾರ್ಡ್ ನಂ. 33ರಲ್ಲಿ ನಡೆದ ಈ ಮಹಾಅಭಿಯಾನ ಜನಸಂಪರ್ಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಂಜಯ ಪಾಟೀಲ್, ಮಾಜಿ ಉಪಮೇಯರ್ ರೇಷ್ಮಾ ಪ್ರವೀಣ್ ಪಾಟೀಲ್, ಬಿಜೆಪಿ ಉತ್ತರ ಮಹಾನಗರ ಅಧ್ಯಕ್ಷ ವಿಜಯ ಕೊಡಗ್ನೂರ್, ಪ್ರಧಾನ ಕಾರ್ಯದರ್ಶಿ ವಿನೋದ ಲಾಂಗೋಟಿ, ಸಂತೋಷ ಬೋರ್ಕರ್, ಸೀಮಾ ಜೋಶಿ, ಬಿಎಲ್‌ಓ ಸವಿತಾ ಕಾಂಬಳೆ, ಪ್ರವೀಣ್ ಪಾಟೀಲ್, ಬಜಂತ್ರಿ ಸರ್ ಹಾಗೂ ಶಿವಲಿಂಗ ಬೊಲೋಗಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜಯ ಪಾಟೀಲ್, “ವಾರ್ಡ್ ನಂ. 33ರ ಬೂತ್ ನಂ. 123ರಲ್ಲಿ ಎಸ್‌ಐಆರ್ ಕಾರ್ಯ ಪ್ರಗತಿಯಲ್ಲಿದ್ದು, ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಪಕ್ಷಾತೀತವಾಗಿ, ರಾಜಕೀಯರಹಿತವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಲ್ಲಿ ಸಾರ್ವಜನಿಕ ಸೇವೆ ಮಾಡಲಾಗುತ್ತಿದೆ. ಅಂಗನವಾಡಿ ಶಿಕ್ಷಕಿಯರು, ಬಿಎಲ್‌ಓಗಳು ಮತ್ತು ಬಿಜೆಪಿ ಕಾರ್ಯಕರ್ತರು ಶ್ರದ್ಧೆಯಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Tags:

error: Content is protected !!