ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ರಾಜಾಪೂರ ಬ್ಯಾರೇಜ್‌ನಿಂದ ಚಿಕ್ಕೋಡಿ ತಾಲೂಕಿನ ನದಿಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಎದುರಾಗಿದ್ದ ಕುಡಿಯುವ ಹಾಗೂ ಕೃಷಿ ನೀರಿನ ಆತಂಕ ಸದ್ಯಕ್ಕೆ ದೂರವಾಗಿದೆ ಎಂದು ಚಿಕ್ಕೋಡಿ ತಹಶಿಲ್ದಾರ್ ರಾಜೇಶ ಬುರ್ಲಿ ಅವರು ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು
ಕಳೆದ ಎರಡು ದಿನಗಳಿಂದ ರಾಜಾಪೂರ ಬ್ಯಾರೇಜ್‌ನಿಂದ ಸುಮಾರು 4 ಸಾವಿರ ಕ್ಯೂಸೆಕ್ ನಷ್ಟು ನೀರು ಚಿಕ್ಕೋಡಿ ತಾಲೂಕಿನ ನದಿಗಳಿಗೆ ಹರಿದು ಬರುತ್ತಿದೆ.
ಹರಿದು ಬಂದಿರುವ ನೀರು ಈಗಾಗಲೇ ಚಿಕ್ಕೋಡಿ ದಾಟಿ ನೆರೆಯ ಕಾಗವಾಡ ತಾಲೂಕಿನ ಆಚೆಯ ತನಕವೂ ತಲುಪಿದೆ.ಪ್ರಸ್ತುತ ನದಿಗಳಿಗೆ ನೀರು ಬಂದಿರುವುದರಿಂದ ಈ ಭಾಗದ ಜಾನುವಾರುಗಳಿಗೆ ಮತ್ತು ಬೆಳೆಗಳಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ.
ಪ್ರಸ್ತುತ ನಮಗೆ ತೀರಾ ಅವಶ್ಯಕತೆ ಇದ್ದಂತಹ ಸಂದರ್ಭದಲ್ಲೇ ಮಹಾರಾಷ್ಟ್ರದಿಂದ ನೀರು ಬರುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಇದರಿಂದ ರೈತರ ಮತ್ತು ಸಾರ್ವಜನಿಕರ ನೀರಿನ ಚಿಂತೆ ನಿವಾರಣೆಯಾಗಿದೆ.
ಮಹಾರಾಷ್ಟ್ರದ ಕೃಷ್ಣಾ ನದಿ ಪಾತ್ರದ ಲ್ಲಿ ಮಳೆ ಮುಂದುವರಿದಿರುವುದರಿಂದ ನದಿಗಳ ನೀರಿನ ಮಟ್ಟವನ್ನು ತಾಲೂಕು ಆಡಳಿತವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಬೈಟ್- ರಾಜೇಶ್ ಬುರ್ಲಿ,ತಹಶೀಲ್ದಾರ ಚಿಕ್ಕೋಡಿ
