Belagavi

ವಿಮೆ ಹಣಕ್ಕಾಗಿ ಪತಿಯನ್ನೇ ಕೊಂದ ಪತ್ನಿ: ಬೆಳಗಾವಿಯಲ್ಲಿ ವೆಬ್ ಸೀರಿಸ್ ಮೀರಿಸುವ ಭೀಕರ ಮರ್ಡರ್ ಸ್ಟೋರಿ!

Share

ಬೆಳಗಾವಿಯಲ್ಲಿ ಕ್ರೈಂ, ತ್ರಿಲ್ಲರ್ ಸಿರಿಸ್ ಮೀರಿಸುವಂತ ಭೀಕರ ಕೊಲೆ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಎಫ್ ಎಸ್ ಎಲ್ ಅಧಿಕಾರಿಗಳು ವರದಿಯನ್ನು ತಿರುಚಿ ಪೊಲೀಸ್ ಬಲೆ ಬಿದ್ದಾರೆ. ಅಷ್ಟಕ್ಕೂ 2 ಕೋಟಿ ವಿಮೆ ಹಣಕ್ಕಾಗಿ ಪತಿಗೆ ಚಟ್ಟ ಕಟ್ಟಿದ ಪತ್ನಿ ಹಾಗೂ ಆಕೆಯ ಪ್ರೀಯಕರ ಜೊತೆಗೆ ಕೃತ್ಯಕ್ಕೆ ಸಾಥ್ ಕೊಟ್ಟ ಪೊಲೀಸ್ ಸಿಬ್ಬಂಧಿ ಸೇರಿ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಯಮಕನಮರಡಿ ಹಾಗೂ ಘಟಪ್ರಭಾ ಪೊಲೀಸ್ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಫೋಟೋದಲ್ಲಿ ಹೀಗೆ ಮಳ್ಳಿ ಹಾಗೇ ಪೋಸ್ ಕೊಟ್ಟಿರೋ ಮಹಿಳೆಯ ಹೆಸರು ಸುಮಾ ಮಂಜರಗಿ. ಈಕೆ ಕ್ರೈಂ, ತ್ರಿಲ್ಲರ್ ವೆಬ್ ಸೀರಿಸ್ ಮೀರುಸವಂತಹ ಒಂದು ಕೃತ್ಯವನ್ನು ನಡೆಸಿ ಸದ್ಯ ಪೊಲೀಸರ ಬಲೆಗೆ ಬಿದಿದ್ದಾಳೆ. ಈಕೆ ಮಾಡಿರೋ ಐಡಿಯಾ ಎಲ್ಲರನ್ನೂ ಬೆಚ್ಚಿಬಿಳಿಸುವಂತೆ ಇದೆ. ಸುಮಾ ಸದ್ಯ ಪತಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಪಾಲು ಆಗಿದ್ದಾಳೆ. ಹೌದು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಸುಮಾ ಎಂಬ ಮಹಿಳೆ ಕಳೆದ 20 ವರ್ಷಗಳ ಹಿಂದೆ ಸಂದೀಪ ಮಂಜರಗಿ ಜೊತೆಗೆ ಮದುವೆ ಮಾಡಲಾಗಿತ್ತು. ಪತಿ 18 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿಹೊಂದಿ ವಾಪಸ್ ಬಂದಿದ್ದನು. ಹೀಗೆ ಬಂದ ವ್ಯಕ್ತಿ ಅಲ್ಲಿ ಇಲ್ಲಿ ಓಡಾಡಿಕೊಂಡು ಇದ್ದ, ಪದೇ ಪದೇ ಟಿ ಹಾಗೂ ತಿಂಡಿಗೆ ಎಂದು ಅಂಗಡಿಯೊಂದಕ್ಕೆ ಹೋಗುತ್ತಿದ್ದನು. ಬಳಿಕ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಪುಂಡಲೀಕ ಡೊಂಬರ್ ಹಾಗೂ ಸಂದೀಪ ನಡುವೆ ಸ್ನೇಹ ಬೆಳೆದಿತ್ತು. ಇಬ್ಬರು ಸೇರಿಕೊಂಡು ಹಿಡಕಲ್ ಡ್ಯಾಂ ಬಳಿಯಲ್ಲಿ ಹೋಟೆಲವೊಂದನ್ನು ಇಟ್ಟುಕೊಳ್ಳುವ ತೀರ್ಮಾನ ಮಾಡಿದ್ರು. ಹೀಗೆ ಹೋಟೆಲ್ ಆರಂಭವಾದ ಕೆಲ ದಿನಗಳಲ್ಲಿಯೇ ನಿವೃತ್ತ ಸೈನಿಕ ಸಂದೀಪ ಪತ್ನಿ ಮಾ ಹಾಗೂ ಪುಂಡಲೀಕ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹ ಕೆಲದಿನಗಳಲ್ಲಿಯೇ ಅನೈತಿಕ ಸಂಬಂಧವಾಗಿ ಮಾರ್ಪಾಡು ಆಗಿತ್ತು. ಇದಕ್ಕೆ ಅಡ್ಡಿಯಾಗಿದ ಪತಿ ಸಂದೀಪ್ ಮುಗಿಸಲು ಸುಮಾ ಹಾಗೂ ಆಕೆಯ ಪ್ರೀಯಕರ ಪುಂಡಲೀಕ ಇಬ್ಬರು ಸೇರಿ ತೀರ್ಮಾನ ಮಾಡಿದ್ರು.

ಮಾರ್ಚ್ 13ರಂದು ಆಕಸ್ಮಿಕವಾಗಿ ಸಂದೀಪ ಮಂಜರಗಿಯ ರಸ್ತೆ ಅಪಘಾತ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸುತ್ತದೆ. ಬಳಿಕ ಪತಿ ಸಂದೀಪ ನನ್ನು ಹುಕ್ಕೇರಿ ಅಲ್ಲಿಂದ ಘಟಪ್ರಭಾ ಜೆಜೆ ಕೋ ಆಸ್ಪತ್ರೆಗೆ ಪತ್ನಿ ಶಿಫ್ಟ್ ಮಾಡಿಸುತ್ತಾಳೆ. ಅಲ್ಲಿಯೇ ಪತಿಗೆ ಚಟ್ಟ ಕಟ್ಟಲು ನಡೆಯುತ್ತದೆ ಮಾಸ್ಟರ್ ಪ್ಲ್ಯಾನ್. ಸಣ್ಣಪುಟ್ಟ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಪೇಷಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗುತ್ತದೆ. ಬಳಿಕ ಆಸ್ಪತ್ರೆಯ ಸಿಬ್ಬಂಧಿ ರಾಹುಲ್ ಜೋಗಿ ಎಂಬಾತನ ಜೊತೆಗೆ ಚರ್ಚೆ ನಡೆಸುತ್ತಾರೆ. ಸಂದೀಪ್ ನಿದ್ರೆ ಮಾತ್ರೆ ಕೊಟ್ಟು ಬಳಿಕ ಸಲೈನ್ ಬಾಟಲಿಯಲ್ಲಿ ವಿಷ ಹಾಗೂ ಟ್ಯಾಕ್ಟಕ್ ಮಿಕ್ಸ್ ಮಾಡಿ ನೀಡುತ್ತಾನೆ. ಇದರಿಂದ ಸಂದೀಪ ಮಂಜರಗಿ ಮಾರ್ಚ್ 15ರಂದು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ. ಬಳಿಕ ಮೃತ ಸಂದೀಪ ಮರಣೊತ್ತರ ಪರೀಕ್ಷೆಯನ್ನು ಬಿಮ್ಸ್ ನಲ್ಲಿ ನಡೆಸಲಾಗಿದೆ. ಇನ್ನೇನು ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ ಎಸ್ ಎಲ್ ವರದಿ ಬರಬೇಕಿರುತ್ತದೇ ಆಗಲೇ ಆರೋಪಿ ಸುಮಾಗೆ ಭಯ ಕಾಡಲು ಆರಂಭಸಿದಿದೆ. ತಾನು ಹಾಗೂ ಪುಂಡಲೀಕ ಸೇರಿ ಪತಿಯನ್ನು ಕೊಲೆ ಮಾಡಿರೋ ಬಗ್ಗೆ ತಾಯಿ ಬಳಿ ಎಲ್ಲಾ ವಿಚಾರವನ್ನು ಹೇಳಿದ್ದಾಳೆ. ತಾಯಿಗೆ ಪರಿಚಿತನಾಗಿದ್ದ ಬಸವರಾಜ್ ಎಂಬ ವ್ಯಕ್ತಿಯ ಮೂಲಕ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಅಶೋಕ ಗುಜನಾಳ್ ಸಂಪರ್ಕ ಮಾಡಲಾಗಿದೆ. ಅಲ್ಲಿಂದ ಎಫ್ ಎಸ್ ಎಲ್ ಕಚೇರಿಯ ಸಿಫಾಯಿ ಅಪ್ಪಸಾಬ್ ನಾಯಿಕೋಡಿ ಪರಿಚಯ ಮಾಡಿಕೊಂಡು ಬಳಿಕ ಲ್ಯಾಬ್ ಸಹಾಯಕ ಚನಯ್ಯ, ಬಳಿಕ ಸಿನಿಯರ್ ಆಫೀಸರ್ ನಾಗರಾಜ್ ಗೆ ಹಣದ ಆಮೀಷವೊಡ್ಡಿ ಕೊಲೆಯನ್ನು ಹೃದಯಾಘಾತ ಎಂದು ತಿದ್ದುಪಡಿ ಮಾಡಿದ್ದಾರೆ. ವರದಿಯಲ್ಲಿ ಇದು ಹೃದಯಾಘಾತ ಎಂದು ಬಂದಿದ್ದು, ಬಳಿಕ ಅಂತ್ಯಕ್ರಿಯೆ ನಡೆಸಲಾಗಿತ್ತು.

ಬಳಿಕ 2 ಕೋಟಿ ರೂಪಾಯಿ ವಿಮೆ ಹಣ ಹಂಚಿಕೆ ಸಂಬಂಧ ಸುಮಾ ಹಾಗೂ ಪುಂಡಲೀಕ ನಡುವೆ ವ್ಯಾಜ್ಯ ಆರಂಭವಾಗಿದ್ದು, ಇಬ್ಬರ ನಡುವೆ ಪರಸ್ಪರ ವೈಮನಸ್ಸು ಸೃಷ್ಠಿಯಾಗಿದೆ. ಆಗಲೇ ಪುಂಡಲೀಕ ಕೊಲೆಯ ಸತ್ಯ ಬೇರೆ ಇದೆ ಎಂಬ ಅರ್ಥದಲ್ಲಿಯೇ ಸ್ಟೇಟಸ್ ಹಾಕಿದ್ರು. ಆಗಲೇ ಮೃತ ನಿವೃತ್ತ ಸೈನಿಕ ಸಂದೀಪ ಸಹೋದರಿನಿಗೆ ಅನುಮಾನ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾನೆ. ಮೊದಲು ಯಮನಮರಡಿ ಪೊಲೀಸರು ಪ್ರಕರಣದಲ್ಲಿ ಎಫರ್ಟ್ ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ಕೇಸ್ ಘಟಪ್ರಭಾ ಪೊಲೀಸ್ ಠಾಣೆಗೆ ವರ್ಗಾವಣೆಮಾಡಲಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಒಂಬತ್ತು ಜನರನ್ನು ಬಂಧಿಸಲಾಗಿದೆ. ಇನ್ನೂ ಪತಿಯ ಮೂರು ವಿಮೆಯನ್ನು ಪತ್ನಿಯೇ ಬೇಕು ಅಂತಲೇ ಮಾಡಿರಬೇಕು ಎನ್ನುವ ಅನುಮಾನ ಸಹ ಇದೆ. ಇನ್ನೂ ರಾಜ್ಯದಲ್ಲಿ ಇದೇ ಮೊದಲ ಭಾರಿಗೆ ಎಫ್ ಎಸ್ ಎಲ್ ಕಚೇರಿಯ ಮೂರು ಜನ ಸಿಬ್ಬಂಧಿಯ ಬಂಧಿಸಲಾಗಿದೆ. ಇದು ಎಫ್ ಎಸ್ ಎಲ್ ಮೇಲೆ ಅನುಮಾನ ಮೂಡಿಸುವಂತೆ ಮಾಡಿದೆ. ಕೃತ್ಯ ಮುಚ್ಚಿಹಾಕಲು ಸುಮಾ 7 ಲಕ್ಷ ಹಣ ಹಾಗೂ ಲೈಂಗಿಕವಾಗಿ ಬಳಕೆಯಾಗಿರೋ ಬಗ್ಗೆಯೂ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

Tags:

error: Content is protected !!