ನಿಪ್ಪಾಣಿಯ ಸಾಯಿಶಂಕರ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 11 ವರ್ಷದ ಬಾಲಕನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.

ಸಾಯಿಶಂಕರ ನಗರದ ನಿವಾಸಿ ವಿಹಾನ ತುಷಾರ್ ಕಾಂಬಳೆ (11) ಗಾಯಗೊಂಡ ಬಾಲಕ. ವಿಹಾನ ತನ್ನ ಮನೆಯ ಮುಂದಿನ ಗಲ್ಲಿಯಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ, ಹಠಾತ್ತನೆ ನುಗ್ಗಿದ ಎರಡು ಬೀದಿ ನಾಯಿಗಳು ಆತನ ಮೇಲೆ ಮುಗಿಬಿದ್ದಿವೆ. ಬಾಲಕನ ಕೈ, ಕಾಲು ಹಾಗೂ ತೊಡೆಯ ಭಾಗಕ್ಕೆ ನಾಯಿಗಳು ತೀವ್ರವಾಗಿ ಕಚ್ಚಿ ಗಾಯಗೊಳಿಸಿವೆ.

ಬಾಲಕನ ಕಿರುಚಾಟ ಕೇಳಿ ತಕ್ಷಣ ಧಾವಿಸಿದ ಪೋಷಕರು ಮತ್ತು ನೆರೆಹೊರೆಯವರು ನಾಯಿಗಳನ್ನು ಓಡಿಸಿ, ಬಾಲಕನನ್ನು ರಕ್ಷಿಸಿದ್ದಾರೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ಮಹಾತ್ಮಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
