Belagavi

ಬೆಳಗಾವಿಯ ಕುಮಾರಸ್ವಾಮಿ ಲೇಔಟ್‌ನಲ್ಲಿ ಕಳ್ಳರ ಸರಣಿ ಹಾವಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Share

ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ದಿನದಿಂದ ದಿನಕ್ಕೆ ಮನೆಗಳ್ಳರ ಹಾಗೂ ದರೋಡೆಕೋರರ ಹಾವಳಿ ಮಿತಿಮೀರಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕದಲ್ಲಿ ದಿನದೂಡುವಂತಾಗಿದೆ. ಬುಧವಾರ ರಾತ್ರಿ ಕೂಡ ಇಲ್ಲಿ ಮನೆಗಳ್ಳತನಕ್ಕೆ ಯತ್ನ ನಡೆದಿದ್ದು, ಕಳ್ಳನ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಲೈವ್ ಆಗಿ ಸೆರೆಯಾಗಿವೆ.

ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಕುಮಾರಸ್ವಾಮಿ ಲೇಔಟ್‌ನಲ್ಲಿ ಕಳೆದ ಎರಡು ಮೂರು ತಿಂಗಳುಗಳಿಂದ ಸರಣಿ ಕಳ್ಳತನ ಮತ್ತು ದರೋಡೆ ಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಈಗಾಗಲೇ ಸುಮಾರು 4 ರಿಂದ 5 ಬಾರಿ ಕಳ್ಳತನಕ್ಕೆ ಯತ್ನಗಳು ನಡೆದಿರುವುದು ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ. ಬುಧವಾರ ರಾತ್ರಿ ಮನೆಗಳ್ಳತನಕ್ಕೆ ಬಂದಿದ್ದ ಖದೀಮನೊಬ್ಬನ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಇದು ನಿವಾಸಿಗಳ ನಿದ್ದೆ ಗೆಡಿಸಿದೆ. ರಾತ್ರಿ ವೇಳೆ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ದರೋಡೆಕೋರರು ಸಂಚರಿಸುತ್ತಿರುವುದರಿಂದ, ಯಾವುದೇ ದೊಡ್ಡ ಅನಾಹುತ ಅಥವಾ ಪ್ರಾಣಹಾನಿ ಸಂಭವಿಸುವ ಮುನ್ನ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಮ್ಮ ಓಣಿಯಲ್ಲಿ ಸರಣಿ ಕಳ್ಳತನದ ಯತ್ನಗಳು ನಡೆಯುತ್ತಿರುವುದರಿಂದ ನಮಗೆ ತೀವ್ರ ಹೆದರಿಕೆ ಉಂಟಾಗಿದೆ. ರಾತ್ರಿ ವೇಳೆ ಮನೆಯಿಂದ ಹೊರಬರಲು ಹಾಗೂ ನಿದ್ರಿಸಲು ಭಯಪಡುವಂತಾಗಿದೆ. ಕೊನೆಯ ಭಾಗದಲ್ಲಿರುವ ನಮ್ಮ ಮನೆಗಳಿಗೆ ಸೂಕ್ತ ಸುರಕ್ಷತೆ ಒದಗಿಸಬೇಕು.

ಕಳೆದ ಎರಡು ತಿಂಗಳಲ್ಲಿ ಈ ಭಾಗದಲ್ಲಿ ಸುಮಾರು 4ರಿಂದ 5 ಬಾರಿ ದರೋಡೆಕೋರರು ಬಂದು ಹೋಗಿದ್ದಾರೆ. ರಾತ್ರಿ ವೇಳೆ ಬೀಟ್ ಪೊಲೀಸರ ಗಸ್ತು ತಿರುಗುತ್ತಿರುವುದನ್ನ ಹೆಚ್ಚಿಸಬೇಕು. ಈ ಸರಣಿ ದರೋಡೆ ಯತ್ನಗಳಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದು, ಅಧಿಕಾರಿಗಳು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

Tags:

error: Content is protected !!