Belagavi

ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ಸಿಬ್ಬಂದಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ!

Share

ಬೆಳಗಾವಿ ಮಹಾನಗರ ಪಾಲಿಕೆಯ ದಕ್ಷಿಣ 01 ಕಂದಾಯ ಶಾಖೆಯಲ್ಲಿ ಮಹತ್ವದ ಸಭೆಯೊಂದು ಜರುಗಿದೆ. ಉಪಾಯುಕ್ತರಾದ ಸಿದ್ಧು ಹುಲ್ಲೋಳ್ಳಿಯವರ ಉಪಸ್ಥಿತಿಯಲ್ಲಿ ಸಿಬ್ಬಂದಿಗಳ ಕುಂದುಕೊರತೆಗಳ ಕುರಿತು ಚರ್ಚಿಸಲಾಗಿದ್ದು, ಇದೇ ವೇಳೆ ಕಂದಾಯ ಶಾಖೆಯ ನೂತನ ಸಂಘದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಉಪಾಯುಕ್ತ ಸಿದ್ಧು ಹುಲ್ಲೋಳ್ಳಿ ಅವರ ನೇತೃತ್ವದಲ್ಲಿ ದಕ್ಷಿಣ 01 ಕಂದಾಯ ಶಾಖೆಯ ಸಿಬ್ಬಂದಿಗಳ ಕುಂದುಕೊರತೆಗಳ ಕುರಿತು ಸುದೀರ್ಘ ಸಭೆ ನಡೆಸಿ, ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಕಂದಾಯ ಶಾಖೆಯ ನೂತನ ಸಂಘದ ಪದಾಧಿಕಾರಿಗಳನ್ನು ಅಧಿಕೃತವಾಗಿ ನೇಮಕ ಮಾಡುವ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಯಲ್ಲೇಶ್ ಬಚ್ಚಲಪುರಿ, ಉಪಾಧ್ಯಕ್ಷರಾಗಿ ಸಂತೋಷ ಓಸಿ, ಪ್ರಧಾನ ಕಾರ್ಯದರ್ಶಿಯಾಗಿ ಸಾಗರ ಕಾಂಬಳೆ, ಕಾರ್ಯದರ್ಶಿಯಾಗಿ ಭರತ ಕೋಲಕಾರ ಹಾಗೂ ಖಜಾಂಚಿಯಾಗಿ ಎಸ್.ಎಸ್. ಪಾಟೀಲ್ ಅವರು ಆಯ್ಕೆಯಾಗಿದ್ದಾರೆ. ಇವರೊಂದಿಗೆ ಸಲಹೆಗಾರರಾಗಿ ಪರಶುರಾಮ ಮೇತ್ರಿ ಹಾಗೂ ಸದಸ್ಯರಾಗಿ ಚಂದ್ರು ಮುರಾರಿ, ರಮೇಶ್ ಹಿರೇಮಠ, ಜೆ.ಬಿ. ಮನಿಯಾರ್, ಪ್ರಮೋದ ಹಲಗೇಕರ, ತ್ರಿವೇಣಿ ಅಷ್ಟೇಕರ, ಪ್ರಕಾಶ ಪಾಟೀಲ್ ಸೇರಿದಂತೆ ಹಲವರನ್ನು ಒಮ್ಮತದಿಂದ ಆರಿಸಲಾಯಿತು.

Tags:

error: Content is protected !!