Belagavi

ರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಬೆಳಗಾವಿಯ ಕೇತಕಿ ಪಾಟೀಲ್‌ಗೆ ಕಂಚಿನ ಪದಕ!

Share

ಪಂಜಾಬ್‌ನ ಲುಧಿಯಾನದಲ್ಲಿ ನಡೆದ ಪ್ರತಿಷ್ಠಿತ 15ನೇ ಫೆಡರೇಷನ್ ಕಪ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳಗಾವಿಯ ಹೆಮ್ಮೆಯ ಕ್ರೀಡಾಪಟು ಕೇತಕಿ ಪಾಟೀಲ್ ಅವರು ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ದೇಶದ ಘಟಾನುಘಟಿ ಸ್ಪರ್ಧಿಗಳು ಭಾಗವಹಿಸಿದ್ದ ಈ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಅವರು ಈ ಮಹತ್ತರ ಸಾಧನೆ ಮಾಡಿದ್ದಾರೆ.

ಇಂಡಿಯನ್ ಬಾಡಿ ಬಿಲ್ಡರ್ಸ್ ಫೆಡರೇಷನ್ (IBBF) ಮಾನ್ಯತೆಯೊಂದಿಗೆ ಪಂಜಾಬ್ ಅಮೆಚೂರ್ ಬಾಡಿಬಿಲ್ಡಿಂಗ್ ಅಸೋಸಿಯೇಷನ್ ಜೂನ್ 12 ಮತ್ತು 13 ರಂದು ಲುಧಿಯಾನದಲ್ಲಿ ಆಯೋಜಿಸಿದ್ದ 15ನೇ ಫೆಡರೇಷನ್ ಕಪ್ ಬಾಡಿಬಿಲ್ಡಿಂಗ್ ಚಾಂಪಿಯನ್‌ಶಿಪ್-2026 ರಲ್ಲಿ ಬೆಳಗಾವಿಯ ಮುಂಚೂಣಿ ಮಹಿಳಾ ದೇಹದಾರ್ಢ್ಯ ಪಟು ಕೇತಕಿ ಪಾಟೀಲ್ ಭರ್ಜರಿ ಸಾಧನೆ ಮಾಡಿದ್ದಾರೆ. ಮಹಿಳೆಯರ ‘ಸ್ಫೋರ್ಟ್ಸ್ ಫಿಸಿಕ್’ ವಿಭಾಗದಲ್ಲಿ ತೀವ್ರ ಪೈಪೋಟಿ ನಡೆಸಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ಐಬಿಬಿಎಫ್‌ನ ಖುಷ್ಬೂ ಯಾದವ್ ಚಿನ್ನದ ಪದಕ ಹಾಗೂ ಕೇರಳದ ಭೂಮಿಕಾ ಕುಮಾರ್ ಬೆಳ್ಳಿ ಪದಕ ಪಡೆದರು. ಈಗಾಗಲೇ ಹಲವು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಕೇತಕಿ ಅವರ ಈ ಐತಿಹಾಸಿಕ ಸಾಧನೆಗೆ ದೇಹದಾರ್ಢ್ಯ ವಲಯ ಸೇರಿದಂತೆ ಗಡಿಭಾಗದಲ್ಲಿ ವ್ಯಾಪಕ ಪ್ರಶಂಸೆ ಹಾಗೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Tags:

error: Content is protected !!