Chikkodi

ಡಿಸೆಂಬರ್ ಒಳಗೆ ‘ಜೈನ ಅಭಿವೃದ್ಧಿ ನಿಗಮ’ ಸ್ಥಾಪಿಸದಿದ್ದರೆ ವಿಜಯಪುರದಿಂದ ಬೆಳಗಾವಿಯವರೆಗೆ ಬೃಹತ್ ಹೋರಾಟ ಗುಣಧರನಂದಿ ಮಹಾರಾಜರ ಎಚ್ಚರಿಕೆ

Share

ಬರುವ ಡಿಸೆಂಬರ್ ಒಳಗಾಗಿ ಕರ್ನಾಟಕ ಸರ್ಕಾರವು ‘ಜೈನ ಸಮಾಜ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸದಿದ್ದರೆ ವಿಜಯಪುರದಿಂದ ಬೆಳಗಾವಿಯವರೆಗೆ ಬೃಹತ ಹೋರಾಟ ನಡೆಸಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರಾಷ್ಟ್ರಸಂತ ಶ್ರೀ ಗುಣಧರನಂದಿ ಮಹಾರಾಜರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಕೋಥಳಿ-ಕುಪ್ಪನವಾಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜೈನ ಸಮುದಾಯದ ಬಾಂಧವರ ಪ್ರಮುಖ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಮಾತನಾಡಿದ ಮಹಾರಾಜರು ರಾಜ್ಯದ ಸಂಸ್ಕೃತಿ ಹಾಗೂ ಪ್ರಗತಿಗೆ ಜೈನ ಸಮಾಜದ ಕೊಡುಗೆ ಅನನ್ಯವಾಗಿದೆ. ಈ ಹಿಂದೆ ದೇವರಾಜ ಅರಸು ಅವರ ಕಾಲದಲ್ಲಿ ಜೈನ ಸಮುದಾಯದ ಸಾವಿರಾರು ಎಕರೆ ಜಮೀನನ್ನು ಬಡವರಿಗೆ ಹಂಚಿದ್ದರಿಂದ ಅಂದಿನ ತ್ಯಾಗದ ಹಿನ್ನೆಲೆಯುಳ್ಳ ಅನೇಕ ಜೈನ ಬಾಂಧವರು ಇಂದು ಆರ್ಥಿಕವಾಗಿ ಹಿಂದುಳಿದಿದ್ದಾರೆ. ರಾಜ್ಯದಲ್ಲಿ ಹಲವು ಸಣ್ಣಪುಟ್ಟ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುತ್ತಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿರುವ ಜೈನ ಸಮುದಾಯವನ್ನು ವಂಚಿಸಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಭಕ್ತರಾಗಿರುವ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದಾರೆ.ಸಮಾಜದ ಹಲವು ವರ್ಷಗಳ ಈ ನ್ಯಾಯಸಮ್ಮತವಾದ ಬೇಡಿಕೆಯನ್ನು ಡಿಸೆಂಬರ್ ಒಳಗಾಗಿ ಈಡೇರಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದರು.

 

ಸಭೆಯಲ್ಲಿ ಮಾಜಿ ಸಚಿವ ವೀರಕುಮಾರ್ ಪಾಟೀಲ, ಮುಖಂಡ ಉತ್ತಮ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಅವರು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದರು. ಟ್ರಸ್ಟ್ ಅಧ್ಯಕ್ಷ ಪದ್ಮಾಕರ್ ಪಾಟೀಲ್, ಕಾರ್ಯದರ್ಶಿ ಪಾಸ್‌ಗೌಡ ಪಾಟೀಲ‌ ಈ ಸಂದರ್ಭದಲ್ಲಿ ಸುನೀಲ ಹನಮವರ, ಶೀತಲ ಪಾಟೀಲ,ಅವರೊಂದಿಗೆ ಶ್ರೀ ೧೦೮ ಆಚಾರ್ಯ ರತ್ನ ದೇಶಭೂಷಣ ದಿಗಂಬರ ಜೈನ ಶಾಂತಿಗಿರಿ ಟ್ರಸ್ಟ್, ಕೋಥಳಿ-ಕುಪ್ಪನವಾಡಿಯ ಅಧ್ಯಕ್ಷ ಪದ್ಮಾಕರ ಪಾಟೀಲ, ಕಾರ್ಯದರ್ಶಿ ಪಾಸಗೌಡ ಪಾಟೀಲ, ನ್ಯಾಯವಾದಿ ಶ್ರೀಪಾಲ್ ಮುನ್ನೋಳಿ, ಖಜಾಂಚಿ ಪಾಯಗೌಡ ಖೋತ, ಸಾಹು ಜೈನ್, ನಿತಿನ್ ಗಾಂಧಿ, ಕಿರಣ ಪಾಟೀಲ, ಕಲ್ಲಪ್ಪ ಮಗೇನ್ನವರ, ತಾತ್ಯಾಸಾಹೇಬ ಪಾಟೀಲ ಅಣ್ಣಾಗೌಡ ಪಾಟೀಲ ಸೇರಿದಂತೆ ‌ಇನ್ನಿತರರು‌ ಉಪಸ್ಥಿತರಿದ್ದರು.

Tags:

error: Content is protected !!