congress

ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆಯಿಂದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ:ಬಿಜೆಪಿ ಶಾಸಕ ದುರ್ಯೋಧನ ಐಹೊಳೆ

Share

ರಾಜ್ಯದ ಇಂದಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ೨೦೨೮ ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ರಾಯಬಾಗ ಮತಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಭವಿಷ್ಯ ನುಡಿದಿದ್ದಾರೆ.

ಅವರು ಚಿಕ್ಕೋಡಿ ತಾಲೂಕಿನ ಖಜಗೌಡನಟ್ಟಿ ಗ್ರಾಮದಲ್ಲಿ ೨೦ ಲಕ್ಷ ರೂಪಾಯಿ ವೆಚ್ಚದ ಶ್ರೀ ಬಾಳುಮಾಮಾ ದೇವಸ್ಥಾನದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ರಾಜಕಾರಣದ ಕುರಿತು ಮಾತನಾಡಿದ ಶಾಸಕರು, ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಲಿದೆ. ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯಿಂದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಸರ್ಕಾರ ಉರುಳುತ್ತದೆ ಎಂಬ ಆತಂಕವಿಲ್ಲ. ಆದರೆ ಪ್ರಸ್ತುತ ಸರ್ಕಾರವು ರಾಯಬಾಗ ಕ್ಷೇತ್ರದ ಭೆಂಡವಾಡ ಹಾಗೂ ಹನುಮಾನ ಏತ ನೀರಾವರಿ ಯೋಜನೆಗಳಿಗೆ ತಕ್ಷಣವೇ ಮಂಜೂರಾತಿ ನೀಡಿ, ಈ ಭಾಗದ ರೈತರ ಹಿತ ಕಾಯಬೇಕು” ಎಂದು ಆಗ್ರಹಿಸಿದರು.

ಬೈಟ್-೧ ದುರ್ಯೋಧನ ಐಹೊಳೆ,ಶಾಸಕ

ಇದೇ ಸಂದರ್ಭದಲ್ಲಿ ಚಂದರಗಿ ಕ್ರೀಡಾ ಶಾಲೆಯ ಅಧ್ಯಕ್ಷರಾದ ಮಹೇಶ ಭಾತೆ ಮಾತನಾಡಿ, ಖಜಗೌಡನಟ್ಟಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಶ್ರೀ ಬಾಳುಮಾಮಾ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ಶ್ರಮಿಸಿ, ೨೦ ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿಸಿದ್ದಾರೆ. ಇಂದು ಕಾಮಗಾರಿಗೆ ಚಾಲನೆ ದೊರೆತಿರುವುದು ಸಂತಸ ತಂದಿದೆ ಎಂದರು.

ಬೈಟ್-೨ ಮಹೇಶ ಭಾತೆ,ಚಂದರಗಿ ಕ್ರೀಡಾ ಶಾಲೆಯ ಅಧ್ಯಕ್ಷರು‌

ಈ ಸಂದರ್ಭದಲ್ಲಿ ವಿಜಯ ಕೋಠಿವಾಲೆ,ಸದಾನಂದ ‌ಘೋರ್ಪಡೆ,ರಾಜು ನಾಯಿಕ ಮಹೇಶ ಚೌಡನ್ನವರ,ಪ್ರಕಾಶ ಪೂಜಾರಿ,ನಿಂಗಪ್ಪಾ ಶಿಂಗಾಯಿ,ದುಂಡಪ್ಪ ಬಾಡಕರ,ಅಣ್ಣಪ್ಪಾ ಪಾಟೀಲ, ದುಂಡಪ್ಪ ಖೋತ,ದುಂಡಪ್ಪ ಮಸ್ತಿ,ಲಕ್ಷ್ಮಣ ಪೂಜಾರಿ ಸೇರಿದಂತೆ ಮಹೇಶ ಚೌಗಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..

Tags:

error: Content is protected !!