ಚಿಕ್ಕೋಡಿ ಮರಾಠಾ ಮಹಾಸಂಘದಿಂದ ಸರ್ಕಾರದ ಮೇಲೆ ಒತ್ತಡ

ಹುಕ್ಕೇರಿ ದ್ವಯರಿಗೂ ಸಚಿವ ಸ್ಥಾನ ನೀಡಲು ಆಗ್ರಹ

ಚಿಕ್ಕೋಡಿಯ ಸಮಗ್ರ ಅಭಿವೃದ್ಧಿಗೆ ಸಮಾಜದ ಪಟ್ಟು
ಚಿಕ್ಕೋಡಿ:ನೂತನ ಸಚಿವ ಸಂಪುಟದಲ್ಲಿ ಸಂತೋಷ್ ಲಾಡ್ ಅವರಿಗೆ ಸ್ಥಾನ ನೀಡಬೇಕು ಎಂದು ಚಿಕ್ಕೋಡಿ ತಾಲೂಕಾ ಮರಾಠಾ ಮಹಾಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಚಿಕ್ಕೋಡಿ ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮರಾಠಾ ಮಹಾಸಂಘದ ತಾಲೂಕಾ ಅಧ್ಯಕ್ಷರಾದ ಬಿ. ಆರ್. ಯಾದವ್ ಹಾಗೂ ಕಾರ್ಯಾಧ್ಯಕ್ಷರಾದ ರಾಮಾ ಮಾನೆ ಅವರು, ಸಂತೋಷ್ ಲಾಡ್ ಅವರು ಸಮಾಜದ ಹಾಗೂ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ನಾಯಕರಾಗಿದ್ದು, ಅವರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.ಹಾಗೂ
ಚಿಕ್ಕೋಡಿ ಭಾಗದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಅವರಿಗೂ ಸಹ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಪ್ರಬಲವಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅನೀಲ ಮಾನೆ,ಬಾಳಾಸಾಹೇಬ ಪಾಟೀಲ,ಜ್ಯೋತಿಬಾ ಖಾಮಕರ ಉಪಸ್ಥಿತರಿದ್ದರು.
