Belagavi

ಯುದ್ಧೋಪಾದಿಯಲ್ಲಿ ಸಾಗುತ್ತಿದೆ ಭಾತಕಾಂಡೆ ಶಾಲೆ ಪಕ್ಕದ ರಸ್ತೆ ಕಾಮಗಾರಿ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಅಭಯ್ ಪಾಟೀಲ್; ಸುಳ್ಳು ಸುದ್ದಿಗಳಿಗೆ ಸ್ಪಷ್ಟನೆ!

Share

• ಭಾತಕಾಂಡೆ ಶಾಲೆ ರಸ್ತೆ ಕಾಮಗಾರಿ ಚುರುಕು
• ಶಾಸಕ ಅಭಯ್ ಪಾಟೀಲ್ ಖುದ್ದು ಪರಿಶೀಲನೆ
• ವೈಯಕ್ತಿಕ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾರ್ಯ
• ಎರಡು ದಿನದಲ್ಲಿ ಸಂಚಾರಕ್ಕೆ ರಸ್ತೆ ಮುಕ್ತ

ಬೆಳಗಾವಿಯ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ರಸ್ತೆಯ ಭಾತಕಾಂಡೆ ಶಾಲೆ ಪಕ್ಕದ ರಸ್ತೆ ಕಾಮಗಾರಿ ಇದೀಗ ಅತ್ಯಂತ ವೇಗವಾಗಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಇಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಗುತ್ತಿಗೆದಾರರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಬೆಳಗಾವಿಯ ಡಾ. ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆಯ ಭಾತಕಾಂಡೆ ಶಾಲೆ ಪಕ್ಕದ ರಸ್ತೆಯ ಕಾಮಗಾರಿ ಯುದ್ಧೋಪಾದಿಯಲ್ಲಿ ಪೂರ್ಣಗೊಳ್ಳುತ್ತಿದೆ. ಇಂದು ಸ್ಥಳಕ್ಕೆ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು.

ಈ ವೇಳೆ ಮಾತನಾಡಿದ ದಕ್ಷಿಣ ಶಾಸಕ ಅಭಯ್ ಪಾಟೀಲ್, ಕೆಲದಿನಗಳ ಹಿಂದಷ್ಟೇ ಈ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೇ, ಕೆಲ ಪತ್ರಿಕೆಗಳಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ ಎಂಬ ಸುದ್ಧಿಯನ್ನು ಭಿತ್ತರಿಸಲಾಗಿತ್ತು. ಆದರೇ, ಇದು ಸರ್ಕಾರದಿಂದ ಮಂಜೂರಾದ ಕಾಮಗಾರಿಯಲ್ಲದೇ, ತಾವೂ ವೈಯಕ್ತಿಕವಾಗಿ ಕೈಗೊಂಡ ಕಾಮಗಾರಿಯಾಗಿದ್ದು, ಕೆಲ ತಾಂತ್ರಿಕ ಸಮಸ್ಯೆಗಳಿಂದ ಕಾಮಗಾರಿ ವಿಳಂಬವಾಗಿತ್ತು. ಗುತ್ತಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು, ಮತ್ತೇ ಕಾಮಗಾರಿ ಆರಂಭಗೊಂಡಿದೆ. ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ಯಾವುದೇ ಕಾಮಗಾರಿಯನ್ನು ಸ್ಥಗಿತಗೊಳಿಸಿಲ್ಲ. ಮುಂಬರುವ 2-3 ದಿನಗಳಲ್ಲಿ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.

ಈ ಸಂದರ್ಭದಲ್ಲಿ ನಗರಸೇವಕ ರಾಜು ಭಾತಕಾಂಡೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.

Tags:

error: Content is protected !!