Belagavi

ಹೊನಗಾದ ಡಾ. ರವಿ ಬಿ. ಪಾಟೀಲ ಆಯುರ್ವೇದ ಕಾಲೇಜಿನಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

Share

12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಂದು ಹೊನಗಾದ ರಾಷ್ಟ್ರೀಯ ಹೆದ್ದಾರಿ-4 ರಲ್ಲಿರುವ ಡಾ. ರವಿ ಬಿ. ಪಾಟೀಲ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ವಿಶೇಷ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಳಗಾವಿ ತಾಲೂಕಿನ ಹೊನಗಾ ಎನ್‌ಹೆಚ್-4 ರಸ್ತೆ ಪಕ್ಕದಲ್ಲಿರುವ ಪ್ರಸಿದ್ಧ ಡಾ. ರವಿ ಬಿ. ಪಾಟೀಲ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.

“ಯೋಗವು ಕೇವಲ ವ್ಯಾಯಾಮವಲ್ಲ, ಅದು ನಮ್ಮ ಆರೋಗ್ಯ, ಮನಸ್ಸಿನ ಶಾಂತಿ ಮತ್ತು ಸಮೃದ್ಧ ಜೀವನದ ಮೂಲಾಧಾರವಾಗಿದೆ” ಎಂಬ ಧ್ಯೇಯದೊಂದಿಗೆ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡು ಜಂಟಿಯಾಗಿ ಯೋಗಾಭ್ಯಾಸ ನಡೆಸಿದರು. ಈ ವಿಶೇಷ ಸಂದರ್ಭದಲ್ಲಿ ಬಿಜೆಪಿ ಉತ್ತರ ಮಂಡಲದ ಪದಾಧಿಕಾರಿಗಳು, ನಗರಸೇವಕರು, ಪ್ರಮುಖ ಹಿರಿಯ ಮುಖಂಡರು, ಆಸ್ಪತ್ರೆಯ ವೈದ್ಯರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Tags:

error: Content is protected !!