Vijaypura

ಶೌಚಾಲಯಕ್ಕಾಗಿ ಅಧಿಕಾರಿಗಳ ಕಾರಿಗೆ ಘೇರಾವ್ ಹಾಕಿದ ಮಹಿಳೆಯರು

Share

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾಲೂಕಿನ ಮದರಿ ಗ್ರಾಮದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಭಾನುವಾರ ಸಾಯಂಕಾಲ ಮಹಿಳೆಯರು ಗ್ರಾಮಕ್ಕೆ ಭೇಟಿ ನೀಡಿದ್ದ ನೋಡಲ್ ಅಧಿಕಾರಿಯ ಕಾರಿಗೇ ಮುತ್ತಿಗೆ ಹಾಕಿ ಘರಾವ್ ಹಾಕಿದ್ದಾರೆ.

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮದರಿ ಗ್ರಾಮದ ಮಹಿಳೆಯರು ಭಾನುವಾರ ಸಾಯಂಕಾಲ ಶೌಚಾಲಯ ಸೌಲಭ್ಯಕ್ಕಾಗಿ ನೋಡಲ್ ಅಧಿಕಾರಿಗೆ ಫೇರಾವ ಹಾಕಿದರು. ಗ್ರಾಮದಲ್ಲಿ ಶೌಚಾಲಯವಿಲ್ಲದೆ ತೊಂದರೆಯಾಗುತ್ತಿದ್ದು, ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.

Tags:

error: Content is protected !!