BELAGAVI

ಎಲ್ಲೇ ಇರಿ, ಎಂತೇ ಇರಿ ಎಂದೆಂದಿಗೂ ಕನ್ನಡವಾಗಿರಿ”; ಆರ್.ಎಲ್. ಕಾನೂನು ಕಾಲೇಜಿನ ‘ಕನ್ನಡ ನುಡಿ ವೈಭವ’ದಲ್ಲಿ ಡಿಸಿಪಿ ನಾರಾಯಣ್ ಬರಮನಿ ಕರೆ

Share

ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ‘ಕನ್ನಡ ನುಡಿ ವೈಭವ-2026’ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಿಸಿಪಿ ನಾರಾಯಣ್ ಬರಮನಿ ಅವರು, ಕನ್ನಡದ ಅಸ್ಮಿತೆಯನ್ನು ಕೊಂಡಾಡುವ ಜೊತೆಗೆ ಸಮಾಜದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾಗೂ ಪೋಕ್ಸೋ ಪ್ರಕರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ ದೊಡ್ಡದಿದೆ ಎಂದು ಅವರು ಈ ವೇಳೆ ಜಾಗೃತಿ ಮೂಡಿಸಿದರು.

ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಮತ್ತು ಕನ್ನಡ ಬಳಗದ ವತಿಯಿಂದ ದು ಕನ್ನಡ ನುಡಿ ವೈಭವ-2026 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆ ನಾಡಿನ ಹಿರಿಮೆ ಗರಿಮೆಯನ್ನು ಸಾರುವ ಬೃಹತ್ ಮೆರವಣಿಗೆಯನ್ನು ನಡೆಸಲಾಯಿತು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಇದರಲ್ಲಿ ಭಾಗಿಯಾಗಿ ಕನ್ನಡದ ಕಂಪನ್ನು ಹರಡಿಸಿದರು.

ನಂತರ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಕೆ.ಕೆ. ವೇಣುಗೋಪಾಲ್ ಸಭಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಂಗನಟ ಡಾ. ಶಶಿಧರ ನರೇಂದ್ರ ಅವರು ಉಪಸ್ಥಿತರಿದ್ಧರು. ಗೌರವಾನ್ವಿತ ಅತಿಥಿಗಳಾಗಿ ಡಿಸಿಪಿ ನಾರಾಯಣ್ ಬರಮನಿ ಅವರು ಉಪಸ್ಥಿತರಿದ್ಧರು. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಎಸ್. ಮುತಾಲಿಕ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮಕ್ಕೆ ಗಣ್ಯರು ಚಾಲನೆಯನ್ನು ನೀಡಿದರು.

ಈ ವೇಳೆ ಮಾತನಾಡಿದ ಡಿಸಿಪಿ ನಾರಾಯಣ್ ಬರಮನಿ ಅವರು, ಕನ್ನಡ ಭಾಷೆ ಒಂದು ಅಸ್ಮಿತೆ. ತನ್ನದೇಯಾದ ಇತಿಹಾಸವನ್ನು ಹೊಂದಿದ್ದು, ಅತ್ಯಂತ ಹೆಚ್ಚು ಜ್ಞಾನಪೀಠ ಪುರಸ್ಕಾರಗಳನ್ನು ಪಡೆದಿದೆ. ಕನ್ನಡವೆಂದರೇ ಸಾಕು ಒಂದು ರೋಮಾಂಚನವಾಗುತ್ತದೆ. ಸುಮಾರು 40 ವರ್ಷಗಳ ಹಿಂದೆ ಕನ್ನಡ ಸಂಘವನ್ನು ಕಟ್ಟಿದ್ದೇವೆ. 1984-85 ರ ದಶಕದ ಸ್ಥಿತಿಗಳನ್ನು ನೆನಪುಗಳನ್ನು ಮೆಲುಕು ಹಾಕಿದರು. ಪ್ರತಿವರ್ಷ ಪೋಕ್ಸೋ, ಡ್ರಗ್ಸ್ ಸೇವನೆದಂತಹ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ವ್ಯಸನಗಳು ಓರ್ವ ವ್ಯಕ್ತಿಯನ್ನೇ ಮಾತ್ರವಲ್ಲ ಸಂಪೂರ್ಣ ಸಂಸಾರದ ಸ್ವಾಸ್ಥ್ಯವನ್ನು ಹದಗೆಡಿಸುತ್ತದೆ. ಸಮಾಜವನ್ನು ಜಾಗೃತವಾಗಿಸಿ ಬಡಿದೆಬ್ಬಿಸುವಲ್ಲಿ ಕಾನೂನು ವಿದ್ಯಾರ್ಥಿಗಳ ಮಾತ್ರ ಹಿರಿದಾಗಿದೆ. ಕಾನೂನು ಪದವಿಧರರ ಆತ್ಮವಿಶ್ವಾಸ ಮತ್ತು ವೈಕ್ತಿತ್ವ ಭಿನ್ನವಾಗಿರುತ್ತದೆ. ಗಿಡಗಳು ಹೆಮ್ಮರವಾಗಿ ಬೆಳೆದರೂ ತನ್ನ ಬೇರನ್ನು ಬಿಡುವುದಿಲ್ಲ. ಅದೇ ರೀತಿ ಎಲ್ಲೇ ಇರಿ ಎಂತೇ ಇರಿ ಎಂದೆಂದಿಗೂ ಕನ್ನಡವಾಗಿರಿ ಎಂದು ಕರೆ ನೀಡಿದರು.

ಈ ವೇಳೆ ಪ್ರಾಂಶುಪಾಲರಾದ ಡಾ. ಎ.ಎಚ್. ಹವಾಲ್ದಾರ್, ಕನ್ನಡ ಬಳಗದ ಪ್ರಭಾರ ಅಧ್ಯಕ್ಷ ಚೇತನ್’ಕುಮಾರ್ ಟಿ.ಎಂ., ಸಂಜನಾ ಇಟಗಿ, ಯಲ್ಲಪ್ಪ ಬಮ್ಮನಳ್ಳಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!