Vijaypura

ದೇವರಹಿಪ್ಪರಗಿ ಬ್ಯಾನರ್‌ನಲ್ಲಿ ಅಧಿಕಾರಿಗಳ ಎಡವಟ್ಟು ತಾಲೂಕಾದರೂ ಸಿಂದಗಿ ಹೆಸರಲ್ಲೇ ಮುದ್ರಣ

Share

• ಸಚಿವರ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಆಕ್ರೋಶ
• ಅಧಿಕಾರಿಗಳ ಬೇಜವಾಬ್ದಾರಿಗೆ ಗ್ರಾಮಸ್ಥರ ಪ್ರಶ್ನೆ

ದೇವರ ಹಿಪ್ಪರಗಿ ತಾಲೂಕು ಆಗಿದ್ದರೂ ಕೂಡ ಸರ್ಕಾರದ ಬ್ಯಾನರ್ ನಲ್ಲಿ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಎಂದು ಬ್ಯಾನರ್; ಸಾರ್ವಜನಿಕರ ಆಕ್ರೋಶ

ದೇವರ ಹಿಪ್ಪರಗಿ ತಾಲೂಕು ಆಗಿದ್ದರೂ ಕೂಡ ಸರ್ಕಾರದ ಬ್ಯಾನರ್ ನಲ್ಲಿ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಎಂದು ಬ್ಯಾನರ್ ಹಾಕಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇವತ್ತು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ದೇವರಹಿಪ್ಪರಗಿ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ನೆರವೇರಿಸಿದರು. ಆದರೆ ಸರ್ಕಾರದಿಂದ ಹಾಕಿದ ಬ್ಯಾನರ್ ನಲ್ಲಿ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದ ಮೇಲೆ ದೇವರ ಹಿಪ್ಪರಗಿ ತಾಲೂಕು ಅಂತ ಇದ್ದರೂ ಕೂಡ ಆಸ್ಪತ್ರೆಯ ಗೇಟ್ ಮುಂಭಾಗದಲ್ಲಿ ಅಳವಡಿಸಿರುವ ಕಾರ್ಯಕ್ರಮದ ಉದ್ಘಾಟನೆ ಬ್ಯಾನರ್ ನಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಅಂತಾ ಪ್ರಿಂಟ್ ಮಾಡಿರೋದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರಿ ಕಾರ್ಯಕ್ರಮದಲ್ಲಿ ಈ ತರ ಎಡವಟ್ಟು ಮಾಡಿಕೊಂಡರೆ ಹೇಗೆ ಎಂದು ಜನರು ಪ್ರಶ್ನೆ ಮಾಡುವಂಥಾಗಿದೆ.

Tags:

error: Content is protected !!