• ಬರಟಗಿ ತಾಂಡಾದಲ್ಲಿ ಭೀಕರ ಅಗ್ನಿ ಅವಘಡ
• ಶಾರ್ಟ್ ಸರ್ಕ್ಯೂಟ್ನಿಂದ ಒಣ ಮೇವು ಭಸ್ಮ
• ರೈತ ಶ್ರೀಕಾಂತ್ಗೆ 2 ಲಕ್ಷ ನಷ್ಟ
• ಪರಿಹಾರ ನೀಡುವಂತೆ ಸಂಕಷ್ಟದಲ್ಲಿರುವ ರೈತ ಮನವಿ

ಶಾರ್ಟ್ ಸರ್ಕ್ಯೂಟ್ ನಿಂದ ಜಾನುವಾರುಗಳಿಗಾಗಿ ಕಾಯ್ದಿರಿಸಿದ್ದ ಒಣ ಮೇವು ಸುಟ್ಟು ಭಸ್ಮವಾದ ಘಟನೆ ವಿಜಯಪುರ ಜಿಲ್ಲೆಯ ಬರಟಗಿ ತಾಂಡಾ 3ರಲ್ಲಿ ನಡೆದಿದೆ.

ಶ್ರೀಕಾಂತ್ ಜಾಧವ ಎಂಬುವರಿಗೆ ಸೇರಿದ 2 ಲಕ್ಷ ಮೌಲ್ಯದ ಒಣ ಮೇವು ಬೆಂಕಿಗಾಹುತಿಯಾಗಿದೆ. ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದ್ರೆ ಬೇಸಿಗೆ ಹಿನ್ನೆಲೆ ಜಾನುವಾರುಗಳಿಗಾಗಿ ಕಾಯ್ದಿರಿಸಿದ್ದ ಮೇವು ಸುಟ್ಟು ಭಸ್ಮವಾಗಿದ್ದು, ಪರಿಹಾರಕ್ಕಾಗಿ ರೈತ ಶ್ರೀಕಾಂತ ಮನವಿ ಮಾಡಿದ್ದಾರೆ..
