State

ಎಚ್‌ಡಿಕೆ ಪಂಥಾಹ್ವಾನಕ್ಕೆ ಡಿಕೆಶಿ ರೆಡಿ ಚರ್ಚೆಯ ವೇದಿಕೆ ಸಮಯ ಅವರೇ ನಿಗದಿಪಡಿಸಲಿ; ಡಿಸಿಎಂ ಡಿ.ಕೆ. ಶಿವಕುಮಾರ್

Share

ಚರ್ಚೆಯ ವೇದಿಕೆ ಸಮಯ ಅವರೇ ನಿಗದಿಪಡಿಸಲಿ
ಬಿಜೆಪಿ ಆಡಳಿತದಲ್ಲಿ ಕಾಂಗ್ರೆಸ್ ಯೋಜನೆಗಳ ನಕಲು
ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ
ಒಳಮೀಸಲಾತಿ ಹೋರಾಟಕ್ಕೆ ನ್ಯಾಯ ಒದಗಿಸಿದ ಸರ್ಕಾರ

ಬಿಡದಿ ಬೃಹತ್ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಕಿದ್ದ ಮುಖಾಮುಖಿ ಚರ್ಚೆಯ ಪಂಥಾಹ್ವಾನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಸ್ವೀಕರಿಸಿದ್ದಾರೆ. ಇದರ ಜೊತೆಯಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಗ್ಯಾರಂಟಿ ಯೋಜನೆಗಳು ಮತ್ತು ಒಳಮೀಸಲಾತಿ ಜಾರಿ ಕುರಿತು ವಿಪಕ್ಷಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಬಿಡದಿಯ ಬೃಹತ್‌ ಟೌನ್‌ಶಿಪ್ (AI ಸಿಟಿ) ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಚರ್ಚೆಗೆ ಬರುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಕಿದ್ದ ಪಂಥಾಹ್ವಾನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಸ್ವೀಕರಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕುಮಾರಸ್ವಾಮಿ ಅವರು ಮುಖಾಮುಖಿ ಚರ್ಚೆಗೆ ಸಾರ್ವಜನಿಕ ವೇದಿಕೆ, ದಿನಾಂಕ ಮತ್ತು ಸಮಯವನ್ನು ಅವರೇ ನಿಗದಿಪಡಿಸಲಿ, ನಾನು ಬರಲು ಸಿದ್ಧನಿದ್ದೇನೆ. ಪೆಟ್ರೋಲ್ ಡಿಸೇಲ್ ಬೆನ್ನಲ್ಲೇ, ರೈತರು ಸಿಮೆಂಟ್ ಕಬ್ಬಿನ ಬೆಲೆ ಹೆಚ್ಚಾಗಿದ್ದು, ಅದನ್ನು ಕಡಿಮೆ ಮಾಡಬೇಕು ಎಂದರು.

ಇನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಮತ್ತು ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಬಿಜೆಪಿ ಸರ್ಕಾರವಿದ್ದಲ್ಲಿ ನಮ್ಮ ಮಾದರಿಗೆ ತಲೆಬಾಗಿ ತಮ್ಮ ರಾಜ್ಯಗಳಲ್ಲಿಯೂ ನಮ್ಮ ಮಾದರಿಯನ್ನು ಉಪಯೋಗಿಸಿಕೊಂಡಿದ್ದಾರೆ. ಬಿಜೆಪಿ ಯಾವುದೇ ಯೋಜನೆಗಳನ್ನು ತರದೇ, ಕಾಂಗ್ರೆಸ್ ಯೋಜನೆಗಳನ್ನು ನಕಲು ಮಾಡಿದ್ದಾರೆ. ನಮ್ಮ ಸಾಧನೆ ನಮಗೆ ತೃಪ್ತಿ ತಂದಿದೆ. 35 ವರ್ಷದಿಂದ ಇದ್ದ ಒಳಮೀಸಲಾತಿ ಹೋರಾಟಕ್ಕೂ ನ್ಯಾಯವನ್ನು ಒದಗಿಸಿಕೊಟ್ಟಿದ್ದೇವೆ. 2 ಜಿಲ್ಲೆ ಬಿಟ್ಟು ಎಲ್ಲೆಡೆ ಆಸ್ಪತ್ರೆಗಳನ್ನು ನೀಡಲಾಗಿದ್ದು, ಎಲ್ಲರಿಗೂ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.

Tags:

error: Content is protected !!