Bailahongala

ಆಸ್ಪತ್ರೆಯಲ್ಲಿ ಭೀತಿ ಸೃಷ್ಟಿಸಿದ ಆರು ಅಡಿಯ ನಾಗಪ್ಪ! ಹೆಡೆ ಎತ್ತಿ ನಿಂತ ಹಾವನ್ನು ಕಂಡು ರೋಗಿಗಳು ಬೇಸ್ತು!

Share

ಅದೊಂದು ಸರ್ಕಾರಿ ಆಸ್ಪತ್ರೆ, ರೋಗಿಗಳು ಚಿಕಿತ್ಸೆಗಾಗಿ ಅಲ್ಲಿಗೆ ಬಂದಿದ್ದರು. ಆದರೆ ಏಕಾಏಕಿ ಆಸ್ಪತ್ರೆಯ ಮೇಲ್ಚಾವಣಿಯಲ್ಲಿ ಪ್ರತ್ಯಕ್ಷವಾದ ಆರು ಅಡಿಯ ಬೃಹತ್ ನಾಗರಹಾವು ರೋಗಿಗಳು ಹಾಗೂ ಸಿಬ್ಬಂದಿಗಳ ನೆಮ್ಮದಿ ಗೆಡಿಸಿದೆ. ಹೆಡೆ ಎತ್ತಿ ನಿಂತ ಹಾವನ್ನು ಕಂಡು ಜನ ಜೀವ ಕೈಯಲ್ಲಿ ಹಿಡಿದು ಓಡಿದ ಭೀಕರ ದೃಶ್ಯ ಬೈಲಹೊಂಗಲದಲ್ಲಿ ಕಂಡು ಬಂದಿವೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಭೀಕರ ನಾಗರಹಾವೊಂದು ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರು ಹಾಗೂ ರೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಆಸ್ಪತ್ರೆಯ ಮೇಲ್ಚಾವಣಿಯಲ್ಲಿ ಏಕಾಏಕಿ ಸುಮಾರು 6 ಅಡಿ ಉದ್ದದ ಬೃಹತ್ ನಾಗರಹಾವು ಹೆಡೆ ಎತ್ತಿ ನಿಂತಿದ್ದನ್ನು ಕಂಡು ರೋಗಿಗಳು ಮತ್ತು ಅವರ ಸಂಬಂಧಿಕರು ಭಯಭೀತರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮತ್ತು ಆಸ್ಪತ್ರೆ ಸಿಬ್ಬಂದಿ, ಪ್ರಸಿದ್ಧ ಉರಗ ರಕ್ಷಕ ಮಲ್ಲಿಕಾರ್ಜುನ ಗಾಣಿಗೇರ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಮಲ್ಲಿಕಾರ್ಜುನ ಅವರು ಅತ್ಯಂತ ಚಾಣಾಕ್ಷತನದಿಂದ ಯಾವುದೇ ಪ್ರಾಣಾಪಾಯವಾಗದಂತೆ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಬಳಿಕ ಆ ಹಾವನ್ನು ಯಾರಿಗೂ ತೊಂದರೆಯಾಗದಂತೆ ಹತ್ತಿರದ ದಟ್ಟ ಅರಣ್ಯ ಪ್ರದೇಶಕ್ಕೆ ತರಳಿ ಮುಕ್ತವಾಗಿ ಬಿಡುವ ಮೂಲಕ ಆಸ್ಪತ್ರೆಯಲ್ಲಿದ್ದ ಎಲ್ಲರೂ ನಿರಾಳರಾಗುವಂತೆ ಮಾಡಿದ್ದಾರೆ.

Tags:

error: Content is protected !!