ಅನಾರೋಗ್ಯದಿಂದ ಚಿಕ್ಕೋಡಿಯ ಹಿರಿಯ ಪತ್ರಕರ್ತ ಸುಭಾಷ್ ದಲಾಲ್ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ನಿನ್ನೆ ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ನಿಧನರಾಗಿದ್ದಾರೆ.ಹುಟ್ಟೂರು ಬೆಳಕೂಡ ಗ್ರಾಮದಲ್ಲಿ ಅಂತಿಮ ವಿಧಿವಿಧಾನಗಳು ಜರುಗಿದವು.ಸದ್ಯ ಅವರು ವಿಜಯವಾಣಿ ದಿನಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕಳೆದ 3_4 ದಶಕಗಳಿಂದ ಅವರು ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು.ಅವರ ಅಗಲಿಕೆಯಿಂದ ಕುಟುಂಬಸ್ಥರು,ಪತ್ರಕರ್ತರು,ಬಂಧು ಮಿತ್ರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಮೃತ ಸುಭಾಷ್ ದಲಾಲ್ ಯವರಿಗೆ ಹೆಂಡತಿ,ಇಬ್ಬರೂ ಮಕ್ಕಳು ಇದ್ದಾರೆ.
