• ಎಸ್ಎಸ್ಎಲ್ಸಿಯಲ್ಲಿ ನಂದಗಡದ ಆಫೀಯಾ ಭರ್ಜರಿ ಸಾಧನೆ
• ಶೇಕಡಾ 95.20 ರಷ್ಟು ಅಂಕ ಗಳಿಸಿದ ಪ್ರತಿಭೆ
• ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಆಫೀಯಾಗೆ ಅದ್ಧೂರಿ ಸತ್ಕಾರ
• ಶಿಕ್ಷಣ ಪ್ರೋತ್ಸಾಹಕ್ಕೆ ಮುಸ್ಲಿಂ ನೌಕರರ ಸಂಘದ ಮುಂದಾಳತ್ವ

ಖಾನಾಪುರ ತಾಲೂಕಿನ ನಂದಗಡದ ವಿದ್ಯಾರ್ಥಿನಿ ಆಫೀಯಾ ವಾಹೀದ್ ಸಕಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 95.20 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸತ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸನಾ ಶಾಹೀನ್ ಸಂಸ್ಥೆ ಹಾಗೂ ಧಾರವಾಡದ ಕರ್ನಾಟಕ ಸ್ಟೇಟ್ ಗೌರ್ನಮೆಂಟ್ ಮುಸ್ಲಿಂ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸತ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಐತಿಹಾಸಿಕ ನಂದಗಡ ಗ್ರಾಮದ ಈ ಪ್ರತಿಭಾವಂತ ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಸನಾ ಶಾಹೀನ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

