Haveri

ಹಾವೇರಿಯಲ್ಲಿ ಹೊತ್ತಿ ಉರಿದ ಪಲ್ಲಕ್ಕಿ ಬಸ್: ಚಾಲಕನ ಸಮಯಪ್ರಜ್ಞೆಯಿಂದ 17 ಪ್ರಯಾಣಿಕರು ಪಾರು!

Share

1. ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಪಲ್ಲಕ್ಕಿ ಭಸ್ಮ
2. ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಬಳಿ ಘಟನೆ
3. ಸಮಯಪ್ರಜ್ಞೆ ಮೆರೆದು ಹದಿನೇಳು ಪ್ರಯಾಣಿಕರ ರಕ್ಷಣೆ
4. ಬ್ರೇಕ್ ಲೈನರ್ ಕಿಡಿಯಿಂದ ಹೊತ್ತಿದ ಬೆಂಕಿ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅನಾಹುತವೊಂದು ತಪ್ಪಿದೆ. ಬೆಂಗಳೂರಿನಿಂದ ಗದಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿಯ ‘ಪಲ್ಲಕ್ಕಿ’ ಬಸ್ ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದ್ದು, ಸ್ಥಳದಲ್ಲಿದ್ದವರ ಎದೆಝಲ್ಲೆನಿಸುವಂತಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಪಲ್ಲಕ್ಕಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಬಸ್ ಸುಟ್ಟು ಕರಕಲಾಗಿದೆ. ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಈ ಬಸ್ಸಿನಲ್ಲಿ ಒಟ್ಟು 17 ಪ್ರಯಾಣಿಕರಿದ್ದರು. ಬಸ್ ಚಲಿಸುತ್ತಿದ್ದಾಗ ಬ್ರೇಕ್ ಲೈನರ್‌ನಿಂದ ಹೊತ್ತಿಕೊಂಡ ಕಿಡಿ ಕ್ಷಣಾರ್ಧದಲ್ಲಿ ಬಸ್ ತುಂಬಾ ವ್ಯಾಪಿಸಿದೆ. ತಕ್ಷಣ ಎಚ್ಚೆತ್ತ ಚಾಲಕ ಫಕ್ಕೀರಪ್ಪ, ಬೆಂಕಿಯ ಕೆನ್ನಾಲೆಯ ನಡುವೆಯೂ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಬಸ್ ಸಂಪೂರ್ಣ ಭಸ್ಮವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!