Belagavi

ದಕ್ಷಿಣ ಕ್ಷೇತ್ರದ ದೇವಸ್ಥಾನಗಳಿಗೆ ಟ್ಯಾಕ್ಸ್ ಕಟ್ಟಲ್ಲ: ಪಾಲಿಕೆ ವಿರುದ್ಧ ಶಾಸಕ ಅಭಯ್ ಪಾಟೀಲ್ ಗುಡುಗು!

Share

• ದಕ್ಷಿಣದಲ್ಲಿ ದೇವಸ್ಥಾನಗಳ ತೆರಿಗೆ ಪಾವತಿಸಲ್ಲ
• ಅಧಿಕಾರಿಗಳ ಸಮ್ಮುಖದಲ್ಲಿ ಅಭಯ್ ಪಾಟೀಲ್ ಕಿಡಿ
• ಬೆಳಗಾವಿಯಲ್ಲಿ ಶಾಸಕರಿಂದ ಜನಸಂಪರ್ಕ ಸಭೆ ಯಶಸ್ವಿ
• ಜನರ ವಿವಿಧ ಸಮಸ್ಯೆಗಳಿಗೆ ದೊರೆಯಿತು ಪರಿಹಾರ

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಇನ್ಮುಂದೆ ದೇವಸ್ಥಾನಗಳ ಮೇಲೆ ವಿಧಿಸಲಾದ ದುಬಾರಿ ತೆರಿಗೆಯನ್ನು ಪಾವತಿಸುವುದಿಲ್ಲ ಎಂದು ಶಾಸಕ ಅಭಯ್ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದ ಶಾಸ್ತ್ರೀನಗರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಶಾಸಕರು, ಪಾಲಿಕೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.
ಇಂದು ಬೆಳಗಾವಿ ಶಾಸ್ತ್ರೀನಗರದ ಪಾಟಿದಾರ ಭವನದಲ್ಲಿ ಇಂದು ಶಾಸಕ ಅಭಯ್ ಪಾಟೀಲ್ ಅವರ ನೇತೃತ್ವದಲ್ಲಿ ಜನಸಂಪರ್ಕ ಸಭೆಯನ್ನು ನಡೆಸಲಾಯಿತು. ಗೂಡ್ಸ್’ಶೇಡ್ ರಸ್ತೆ, ಶಾಸ್ತ್ರೀ ನಗರ, ಮಹಾದ್ವಾರ ರಸ್ತೆ, ಕಪಿಲೇಶ್ವರ ಕಾಲನಿ, ಹೊಸೂರು, ಓಂ ನಗರ ಮತ್ತು ಶಹಾಪುರದ ಜನರು ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟಿರು.

ಈ ಭಾಗದ ನಗರಸೇವಕರಾದ ಗಿರೀಶ್ ಧೋಂಗಡಿ, ರಾಜು ಭಾತಕಾಂಡೆ, ರವಿ ಸಾಂಬ್ರೇಕರ, ಜಯಂತ್ ಜಾಧವ್, ಭಾಗವತ್ ಇನ್ನುಳಿದವರೊಂದಿಗೆ ಸುಮಾರು 20ಕ್ಕೂ ಹೆಚ್ಚು ಇಲಾಖೆಯ ಅಧಿಕಾರಿಗಳು ಜನಸಂಪರ್ಕ ಸಭೆಯಲ್ಲಿ ಭಾಗಿಯಾಗಿದ್ಧರು. ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಕಾರ್ಯವನ್ನು ಮಾಡಲಾಯಿತು. ಇನ್ನುಳಿದ ಉನ್ನತಮಟ್ಟದ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳನ್ನು ಮುಂಬರುವ 15 ದಿನಗಳಲ್ಲಿ ಚರ್ಚಿಸಿ ಪರಿಹರಿಸುವ ಭರವಸೆಯನ್ನು ಶಾಸಕರು ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ ಅವರು ಮುಂಬರುವ ದಿನಗಳಲ್ಲಿ, ವಡಗಾಂವ, ಖಾಸಭಾಗ, ಟಿಳಕವಾಡಿ, ಹಿಂದವಾಡಿ, ಭಾಗ್ಯನಗರ, ರಾಣಿಚೆನ್ನಮ್ಮ ನಗರ, ಗುರುಪ್ರಸಾದ ಕಾಲನಿಗಳಲ್ಲಿ 4 ವಾರಗಳಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಜನಸಂಪರ್ಕ ಸಭೆ ನಡೆಯಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸೈಕಲ್ ಯಾತ್ರೆ ಮೂಲಕ ಜನರನ್ನು ಸಂಪರ್ಕಿಸುವ ಕೆಲಸವನ್ನು ಮಾಡುವುದರೊಂದಿಗೆ ಈಗ ಜನಸಂಪರ್ಕ ಸಭೆಯ ಮೂಲಕ ಜನರ ಅಹವಾಲುಗಳನ್ನು ಆಲಿಸಲಾಗುತ್ತಿದೆ ಎಂದು ತಿಳಿದರು.

ಇನ್ನು ದೇವಸ್ಥಾನಗಳ ಮೇಲೆ ಅತಿಯಾದ ಕರ ಹೇರಿಕೆಯ ವಿಷಯ ಜನರಿಂದ ಪ್ರಸ್ತಾಪವಾಗುತ್ತಿದ್ದಂತೆ ಶಾಸಕ ಅಭಯ್ ಪಾಟೀಲ್ ಅವರು ಪಂಚತಾರಾ ಹೋಟೆಲ್’ಗಳಂತೆ ಹೇರಿರುವ ಕರವನ್ನು ಕಡಿಮೆಗೊಳಿಸಿ ಮೂಲ ಪದ್ಧತಿಯನ್ನು ಅನುಸರಿಸಬೇಕು. ಅಲ್ಲದೇ ಬೆಳಗಾವಿ ದಕ್ಷಿಣ ಕ್ಷೇತ್ರದ ದೇವಸ್ಥಾನಗಳೂ ಕರ ನೀಡುವುದಿಲ್ಲ. ಈ ಕುರಿತು ಕಮಿಷ್ನರ್ ಅವರೊಂದಿಗೆ ಮಾತನಾಡುವುದಾಗಿ ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಸುಮಾರು 20ಕ್ಕೂ ಅಧಿಕ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!